ಕರಾವಳಿ

ಕುಂದಾಪುರ:ಬೀಜಾಡಿ ಸಮುದ್ರಕ್ಕೆ ಈಜಲು ತೆರಳಿದ ಬೆಂಗಳೂರಿನ ನಾಲ್ವರಲ್ಲಿ ಮೂವರು ಸಾವು

Views: 315

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ತಾಲೂಕಿನ ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಮೀಪದ ಸಮುದ್ರಕ್ಕೆ ಈಜಲು ಹೋದ ಬೆಂಗಳೂರಿನ ನಾಲ್ವರು ಯುವಕರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರ ಶವ ಸಿಕ್ಕಿದೆ. ಇನ್ನೊಬ್ಬರ ಶವಕ್ಕಾಗಿ ಶೋಧನೆ ನಡೆದಿದೆ.

ಬೆಂಗಳೂರಿಂದ ಬಂದಿದ್ದ 10 ಮಂದಿ ಯುವಕರ ತಂಡವು ಕುಂಬಾಶಿಯ ಗಾಯಿತ್ರಿ ಕಾಂಪೌಂರ್ಟ್ನಲ್ಲಿ ತಂಗಿದ್ದು ಇಂದು ಮಧ್ಯಾಹ್ನ 9 ಮಂದಿ ಯುವಕರು ಸಮುದ್ರ ಸ್ನಾನ ಮಾಡಲೆಂದು ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ.

ಸ್ಥಳೀಯ ಮೀನುಗಾರರು “ಅದು ಸೆಲೆ ಹೊಂಡ ಮುಂದಕ್ಕೆ ಹೋಗಬೇಡಿ” ಎಂದು ಎಚ್ಚರಿಸಿದರೂ ನಿರ್ಲಕ್ಷ ತೋರಿದ ಪ್ರವಾಸಿ ಯುವಕರು ಸಮುದ್ರದ ಅಬ್ಬರದ ಅಲೆಗೆ ನಾಲ್ವರು ಕೊಚ್ಚಿ ಹೋಗಿದ್ದು ಓರ್ವನನ್ನು ತಕ್ಷಣ ಸ್ಥಳೀಯರು ಹಾಗೂ ಜೊತೆಗೆ ಇದ್ದ ಯುವಕರು ಸೇರಿ ಎತ್ತಿ ಮೇಲಕ್ಕೆ ತಂದಿದ್ದಾರೆ. ಆದರೆ ಆತ ಗಂಭೀರ ಗೊಂಡಿದ್ದು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕಳಿಸಲಾಯಿತು.

ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಜೀವನ್ ಮಿತ್ರ ನಾಗರಾಜ್ ಪುತ್ರನ್ ರವರು ಸ್ಥಳೀಯರ ಸಹಕಾರದಿಂದ ಇಬ್ಬರ ಮೃತದೇಹವನ್ನು ಪತ್ತೆ ಹಚ್ಚಲಾಯಿತು. ನಾಪತ್ತೆಯಾದ ಇನ್ನೊರ್ವ ಯುವಕನ ಹುಡುಕಾಟ ಮುಂದುವರೆದಿದೆ.

 

Related Articles

Back to top button