ಕರಾವಳಿ

ಎಸ್ಐಟಿಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ

Views: 173

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಸೌಜನ್ಯ ತಾಯಿ ಕುಸುಮಾವತಿ ಎಸ್.ಐ.ಟಿ ಅಧಿಕಾರಿಗಳಿಗೆ ಗುರುವಾರ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿಂಬರಹ ನೀಡಿದ್ದಾರೆ.

ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮನೆಯವರು ಗುರುವಾರ ಮಧ್ಯಾಹ್ನ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು‌ ಅಧಿಕಾರಿಗಳ ಸೂಚನೆಯ ಮೇರೆಗೆ ಆರಂಭದಲ್ಲಿ ಅಲ್ಲಿಂದ ಹಿಂತಿರುಗಿದ್ದರು. ಆದರೆ ಬಳಿಕ ಅಧಿಕಾರಿಗಳ ಸೂಚನೆಯಂತೆ ಸೌಜನ್ಯ ತಾಯಿ ಕುಸುಮಾವತಿ ಎಸ್.ಐ.ಟಿ ಕಚೇರಿಗೆ ಬಂದು ದೂರನ್ನು ನೀಡಿದ್ದಾರೆ.

ಸಾಕ್ಷಿ ದೂರುದಾರನಾಗಿ ಬಂದ ಚೆನ್ನಯ್ಯ ಯುಟ್ಯೂಬರ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಸೌಜನ್ಯ ಪ್ರಕರಣದ‌ ಬಗ್ಗೆ ಹಲವು ಹೇಳಿಕೆಗಳನ್ನು ನೀಡಿದ್ದ ಈ ಹಿನ್ನಲೆಯಲ್ಲಿ ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಸೌಜನ್ಯಳ ಸಾವಿಗೆ ಕರ್ನಾಟಕ ರಾಜ್ಯ ಸರಕಾರ ಮತ್ತು ಎಸ್ಐಟಿಯು ನ್ಯಾಯವನ್ನು ನೀಡಬೇಕೆಂದು ದೂರಿನಲ್ಲಿ ಸೌಜನ್ಯಾ ತಾಯಿ ಆಗ್ರಹಿಸಿದ್ದಾರೆ.

 

Related Articles

Back to top button