ಕರಾವಳಿ

ತಲೆ ಬುರುಡೆ ಮೂಲ ರಹಸ್ಯ! ಎಸ್ಐಟಿ ಮುಂದೆ ಮಾಸ್ಕ್ ಮ್ಯಾನ್ ಚಿನ್ನಯ್ಯ ಹೇಳಿದ್ದೇನು?

Views: 191

ಕನ್ನಡ ಕರಾವಳಿ ಸುದ್ದಿ: ತಲೆಬುರುಡೆ ತಂದ ಕೇಸ್ ಗೆ  ಚಿನ್ನಯ್ಯ ಅಲಿಯಾಸ್ ಚೆನ್ನ ಅರೆಸ್ಟ್ ಆಗಿದ್ದಾನೆ. ಆದರೆ ಎಸ್ಐಟಿ ವಿಚಾರಣೆ ವೇಳೆ ಬುರುಡೆ ಯಾರೋ ತಂದು ಕೊಟ್ಟಿದ್ದಾಗಿ ಗೊಂದಲವಾದ ಹೇಳಿಕೆ ನೀಡುತ್ತಿದ್ದಾನೆ.

ಮಾಸ್ಕ್ ಮ್ಯಾನ್ ಚಿನ್ನಯ್ಯಗೆ 2 ಲಕ್ಷ ರೂಪಾಯಿ ಹಣವನ್ನು ಗ್ಯಾಂಗ್ ಒಂದು ನೀಡಿ ಸುಳ್ಳು ದೂರು ನೀಡಲು ಟ್ರೈನಿಂಗ್ ನೀಡಿದ್ದಾರಂತೆ. ಆ ಟ್ರೈನಿಂಗ್ ಪಡೆದ ಬಳಿಕ ಪೊಲೀಸರಿಗೆ ಚಿನ್ನಯ್ಯ ಸುಳ್ಳು ದೂರು ಕೊಟ್ಟಿದ್ದ. ಗ್ಯಾಂಗ್ ಒಂದು ತಲೆ ಬುರುಡೆಯನ್ನು ಚಿನ್ನಯ್ಯನ ಕೈಗೆ ಕೊಟ್ಟು ಅದನ್ನು ಪೊಲೀಸರು, ಕೋರ್ಟ್ ಗೆ ಒಪ್ಪಿಸು ಎಂದು ಹೇಳಿದ್ದಾರಂತೆ.

ಆದರೆ ಎಸ್ಐಟಿ ವಿಚಾರಣೆಯಲ್ಲಿ ಯಾರೋ ತಲೆ ಬುರುಡೆ ತಂದು ಕೊಟ್ಟಿದ್ದಾರೆ ಎಂದು ಚಿನ್ನಯ್ಯ ಹೇಳುತ್ತಿದ್ದಾನೆ. ಜುಲೈ 11 ರಂದು ಕೋರ್ಟ್ನಲ್ಲಿ ತಾನೇ ಭೂಮಿ ಅಗೆದು ತಂದಿದ್ದಾಗಿ ಹೇಳಿಕೆ ಕೊಟ್ಟಿದ್ದನು.

ಇದೇ ಆಧಾರದ ಮೇಲೆ ಆ ಬುರುಡೆಯನ್ನು ಫಾರೆನ್ಸಿಕ್ ಕಳುಹಿಸಿ ಸ್ಥಳ ಪರಿಶೋಧನೆಯನ್ನು ಆರಂಭಿಸಲಾಗಿತ್ತು. ಆದರೆ ನಿರಂತರ ತನಿಖೆಯಿಂದಾಗಿ ಬುರುಡೆ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ. ಅದನ್ನು ಎಲ್ಲಿಂದ ತಂದ್ದಿದ್ದು ಎನ್ನುವ ಬಗ್ಗೆ ಹೇಳಿಕೆ ನೀಡುತ್ತಿಲ್ಲ. ಹೀಗಾಗಿ ಡಿಜಿಪಿ ಮೊಹಾಂತಿ ಅವರ ನಿರ್ದೇಶನದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ವಿಚಾರಣೆಯಲ್ಲಿ ಬುರುಡೆ ನಾನು ಅಗೆದು ತಂದಿಲ್ಲ ಅದನ್ನು ತಂದು ಕೊಟ್ಟ ಗ್ಯಾಂಗ್ ತಂದು ಕೊಟ್ಟಿತ್ತು. ಇದರ ಆಧಾರದಲ್ಲಿ ಸುಳ್ಳು ಸಾಕ್ಷ್ಯ ಹಾಗೂ ಸುಳ್ಳು ಹೇಳಿಕೆ ಆಧಾರದಲ್ಲಿ ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು. ಕೋರ್ಟ್ನಲ್ಲಿ ಬುರುಡೆ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದನು. ಸದ್ಯ ಹೆಚ್ಚಿನ ತನಿಖೆಗಾಗಿ ರಿವರ್ಸ್ ತನಿಖೆ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ.

 

 

Related Articles

Back to top button