ಕರಾವಳಿ

ಧರ್ಮಸ್ಥಳ: ಬುರುಡೆ ಹಿಡಿದುಕೊಂಡ ಬಂದಿದ್ದ ಮಾಸ್ಕ್ ಮ್ಯಾನ್ ಅಸಲಿ ಮುಖ ಬಹಿರಂಗ

ಸೂತ್ರಧಾರರು ಹೇಳಿದಂತೆ ನಾನು ಪಾತ್ರ----ಮಾಸ್ಕ್ ಮ್ಯಾನ್ ಚಿನ್ನಯ್ಯ

Views: 175

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರುಡೆ ಹಿಡಿದುಕೊಂಡ ಬಂದಿದ್ದ ದೂರುದಾರ ಮಾಸ್ಕ್ ಮ್ಯಾನ್ ಅಸಲಿ ಮುಖ ಬಹಿರಂಗವಾಗಿದೆ.

ಮಾಸ್ಕ್ ಮ್ಯಾನ್ ಬಂಧನಕ್ಕೆ ಧರ್ಮಸ್ಥಳದ ಭಕ್ತಾದಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಬುರುಡೆ ಹಿಡಿದುಕೊಂಡ ಬಂದಿದ್ದ ಚಿನ್ನಯ್ಯ ಎಲ್ಲ ಬುರುಡೆ ಬಿಟ್ಟು, ಜನರು, ಪೊಲೀಸರನ್ನು ಬೇಸ್ತುಬೀಳುವಂತೆ ಮಾಡಿದ್ದ. ಮಂಜುನಾಥಸ್ವಾಮಿ ಸುಳ್ಳು ದೂರು ನೀಡಿದವರನ್ನು ಸುಮ್ಮನೇ ಬಿಡಲ್ಲ ಎಂದಿದ್ದಾರೆ ಭಕ್ತಾದಿಗಳು.

ಮಾಸ್ಕ್ ಮ್ಯಾನ್ ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಸುಳ್ಳು ದೂರು ನೀಡಿದ ಆರೋಪ ಹಾಗೂ ಮೊದಲ ಬುರುಡೆಯನ್ನು ಎಲ್ಲಿಂದ ತಂದ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡದೇ ಇರೋ ಕಾರಣದಿಂದ ಕೇಸ್ ದಾಖಲಿಸಿ, ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಎಸ್‌ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ಬಂಧಿಸಿದ್ದಾರೆ. ಈಗ ಧರ್ಮಸ್ಥಳದ ಕೇಸ್ ನಲ್ಲಿ ದೂರುದಾರ, ಸಾಕ್ಷಿಯಾಗಿದ್ದ ಚಿನ್ನಯ್ಯ ಅಲಿಯಾಸ್ ಚೆನ್ನ ಈಗ ಎಸ್‌ಐಟಿಯ ಅತಿಥಿಯಾಗಿದ್ದಾನೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಬಂಧಿಸುತ್ತಿದ್ದಂತೆ, ಧರ್ಮಸ್ಥಳದಲ್ಲಿ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದಲ್ಲಿ ಜೈ ಧರ್ಮಸ್ಥಳ ಎಂಬ ಪ್ಲೇಕಾರ್ಡ್ ಹಿಡಿದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಹಾಗೂ ವೀರೇಂದ್ರ ಹೆಗಡೆಯವರಿಗೆ ಜೈಕಾರವನ್ನು ಭಕ್ತರು ಕೂಗಿದ್ದಾರೆ. ಮಂಜುನಾಥ್ ಸ್ವಾಮಿ, ಅಣ್ಣಪ್ಪ ಸ್ವಾಮಿ ಯಾರನ್ನೂ ಬಿಡಲ್ಲ. ಜನ್ಮ, ಜನ್ಮಕ್ಕೂ ಕರ್ಮದ ಪಾಪ ಅನುಭವಿಸುತ್ತಾರೆ ಎಂದು ಭಕ್ತಾದಿಗಳು ಸುಳ್ಳು ದೂರು ನೀಡಿದ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನಯ್ಯ ಹೇಳಿದ್ದೇನು?

ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನನ್ನು ಧರ್ಮಸ್ಥಳ ದೇವಸ್ಥಾನದ ವಿರೋಧಿ ಗ್ಯಾಂಗ್‌ ಸಂಪರ್ಕಿಸಿತ್ತು. ಮಾತುಕತೆ ನಡೆಸುವ ವೇಳೆ ಹಣದ ಆಮಿಷ ಒಡ್ಡಿದ್ದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಈ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತದೆ ಎಂದು ಹೇಳಿದ್ದರು.

ಯಾವುದೇ ಕಾರಣಕ್ಕೂ ನೀನು ಭಯ ಪಡುವ ಅಗತ್ಯವಿಲ್ಲ. ತನಿಖೆಯಾದ ನಂತರ ಹಲವು ಜನ ದೂರುದಾರರು ಬರುತ್ತಾರೆ. ಎಲ್ಲ ತನಿಖೆ ನಡೆಯುತ್ತದೆ ಎಂದು ಭರವಸೆ ನೀಡಿದ್ದರು.

ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ಸ್ವಲ್ಪ ತರಬೇತಿ ನೀಡಲಾಗಿತ್ತು. ಪೊಲೀಸರು ಕೇಳಿದಾಗ ಯಾವ ರೀತಿ ಉತ್ತರ ಹೇಳಬೇಕು ಎನ್ನುವುದನ್ನು ತಿಳಿಸಲಾಗಿತ್ತು. ನಂತರ ಸೂತ್ರಧಾರರು ಹೇಳಿದಂತೆ ನಾನು ಪಾತ್ರ ಮಾಡುತ್ತಿದ್ದೆ. ಅವರು ಹೇಳಿದಂತೆ ನಾನು ಮಾಹಿತಿ ನೀಡುತ್ತಿದ್ದೆ ಎಂದು ಚಿನ್ನಯ್ಯ ತಿಳಿಸಿದ್ದಾರೆ.

 

Related Articles

Back to top button