ಅನನ್ಯ ಭಟ್ ನನ್ನ ಮಗಳು ಎಂದವರು.. ಇದೀಗ ನನ್ನ ಮಗಳೇ ಅಲ್ಲ..! ಉಲ್ಟಾ ಹೊಡೆದ ಸುಜಾತ ಭಟ್

Views: 88
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದಲ್ಲಿ ಅನಾಮಿಕನ ದೂರು ಒಂದು ಕಡೆಯಾದರೇ, ಸುಜಾತಾ ಭಟ್ ಎಂಬ ವೃದ್ದ ಮಹಿಳೆಯ ದೂರು ಸಂಚಲನ ಸೃಷ್ಟಿಸಿತ್ತು. ಇದೀಗ ಸುಜಾತಾ ಭಟ್ ಉಲ್ಟಾ ಹೊಡೆದಿದ್ದಾಳೆ. ಸುಳ್ಳು ಹೇಳಿದ್ದೇನೆ. ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟರು ಎಂದು ಸಂದರ್ಶನವೊಂದರಲ್ಲಿ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.
ಧರ್ಮಸ್ಥಳದಲ್ಲಿ ಅನಾಮಿಕನ ದೂರು ಒಂದು ಕಡೆಯಾದರೇ, ಸುಜಾತಾ ಭಟ್ ಎಂಬ ವೃದ್ದ ಮಹಿಳೆಯ ದೂರು ಸಂಚಲನ ಸೃಷ್ಟಿಸಿತ್ತು. ಇದೀಗ ಏಕಾಏಕಿ ಸುಜಾತಾ ಭಟ್ ಉಲ್ಟಾ ಹೊಡೆದಿದ್ದಾಳೆ. ‘ಸುಳ್ಳು ಹೇಳಿದ್ದೇನೆ’, ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟರು ಎಂದು ಸಂದರ್ಶನವೊಂದರಲ್ಲಿ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.
ಇದೀಗ ಖಾಸಗಿ ಯೂಟ್ಯೂಬ್ ಚಾನೆಲ್ವೊಂದರಲ್ಲಿ ಸುಜಾತಾ ಭಟ್ ಅಸಲಿ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ಸುಜಾತಾ ಭಟ್, ‘‘ಅನನ್ಯಾ ಭಟ್ ಅಂತ ನನಗೆ ಮಗಳೇ ಇರಲಿಲ್ಲ. ಇಷ್ಟು ದಿನ ನಾನೂ ಸುಳ್ಳು ಹೇಳಿದ್ದೇನೆ. ಕೆಲವರು ನನಗೆ ಹೀಗೆ ಸುಳ್ಳು ಹೇಳು ಅಂತ ಹೇಳಿದ್ದರು ಅದಕ್ಕೆ ನಾನು ಹೇಳಿದ್ದೇನೆ. ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳು ಅಂತ ಅವರೆಲ್ಲಾ ಹೇಳಿದ್ದರು. ಅದಕ್ಕೆ ನಾನು ಹೇಳಿಬಿಟ್ಟೆ. ನಾನು ಯಾವುದೇ ದುಡ್ಡಿಗೊಸ್ಕರ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಅಂತ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದ್ರೆ, ನನ್ನ ಸಹಿ ಇಲ್ಲದೇ ಆಸ್ತಿಯನ್ನು ಹೇಗೆ ಕೊಟ್ರಿ ಅಂತ ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದಾರೆ. ಹೀಗೆ ಮಾತನ್ನು ಮುಂದುವರೆಸಿದ ಅವರು, ನಾನು ಜನರ ಭಾವನೆಗಳ ಜೊತೆಗೆ ಆ ಆಡಿಲ್ಲ. ಅವರೆಲ್ಲಾ ಸೇರಿಕೊಂಡು ಪ್ರಚೋದಿಸುವಂತೆ ಮಾಡಿದ್ರು. ಅನನ್ಯಾ ಭಟ್ ಅನ್ನೋದೇ ಸುಳ್ಳು. ಧರ್ಮಸ್ಥಳ ದೇವರಿಗೆ ನಾನು ದಕ್ಕೆ ತಂದಿಲ್ಲ. ನಾನು ಕೇಳುತ್ತಿರುವುದು ನನ್ನ ಆಸ್ತಿ ಅಷ್ಟೇ. ಆಸ್ತಿಗೋಸ್ಕರ ಅನನ್ಯಾ ಭಟ್ ಕಥೆಯನ್ನು ಕಟ್ಟಿದ್ದೇನೆ. ಈ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ಕರ್ನಾಟಕದ ಜನತೆಗೆ ನಾನು ಕ್ಷಮೆ ಕೆಳುತ್ತೇನೆ. ನನ್ನಿಂದ ತಪ್ಪಾಗಿದೆ ಧರ್ಮಸ್ಥಳಕ್ಕೂ ನಾನು ಕ್ಷಮೆ ಕೇಳುತ್ತೇನೆ ದಯವಿಟ್ಟು ಕ್ಷಮಿಸಿ’’ ಎಂದು ಎಂದಿದ್ದಾರೆ.