ಕರಾವಳಿ

ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ಅನನ್ಯ ಕೇಸ್‌ ವಾಪಸ್ ಪಡೆಯಲು ಸುಜಾತ ಭಟ್ ನಿರ್ಧರಿಸಿದ್ದಾರೆಯೇ? 

Views: 166

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದಲ್ಲಿ ಅನನ್ಯ ಭಟ್ ಎಂಬ ಯುವತಿ ನಾಪತ್ತೆಯಾಗಿದ್ದಾರೆ ಎಂದು ನೀಡಿದ್ದ ದೂರನ್ನು ವಾಪಸ್ ಪಡೆಯಲು ಸುಜಾತ ಭಟ್ ನಿರ್ಧರಿಸಿದ್ದಾರೆಯೇ? ಈ ಕೇಸ್ಗೆ ಕುತೂಹಲ ಮೂಡಿಸಿದೆ.

ಅನನ್ಯ ಭಟ್ ನಾಪತ್ತೆಯಾಗಿದ್ದಾರೆ ಎಂದು ವೃದ್ಧೆ ಸುಜಾತ ಭಟ್ ಪೊಲೀಸರಿಗೆ ನೀಡಿದ್ದ ದೂರು ಅನ್ನು ವಾಪಸ್ ಪಡೆಯುವುದು ಬಹುತೇಕ ಖಚಿತವಾಗಿದೆ. ಸುಜಾತ ಭಟ್ ಈಗ ಮಾನಸಿಕ ಒತ್ತಡಕ್ಕೊಳಗಾಗಿದ್ದಾರೆ. ತಮಗೆ ಮೊದಲಿನ ಬೆಂಬಲ ಸಿಗುತ್ತಿಲ್ಲ ಎಂಬುದು ಈ ನಿರ್ಧಾರಕ್ಕೆ ಕಾರಣ. ಜೊತೆಗೆ ದೂರಿಗೆ ಸಾಕ್ಷ್ಯಗಳೆಲ್ಲಾ ಕೊರತೆ ಇದೆ.ಸುಜಾತ ಭಟ್ ತೋರಿಸಿದ ಅನನ್ಯ ಭಟ್ ಪೋಟೋ ಆಕೆಯದ್ದಲ್ಲ. ಅದು ವಾಸಂತಿ ಎಂಬ ಮತ್ತೊಬ್ಬ ಮಹಿಳೆಯದ್ದು. ಇದರಿಂದ ಸುಜಾತ ಭಟ್ ಗೆ ಹಿನ್ನಡೆಯಾಗಿದೆ. ಅವರು ಹೇಳಿದ್ದು ಸುಳ್ಳು ಎಂಬುದು ಸ್ಪಷ್ಟವಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲೂ ಸುಜಾತ ಭಟ್ ರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲದರಿಂದ ಸುಜಾತ ಭಟ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಜೊತೆಗೆ ಅನನ್ಯ ಭಟ್ ನಾಪತ್ತೆ ಬಗ್ಗೆ ಯಾವುದೇ ಸಾಕ್ಷಿ, ಆಧಾರಗಳೂ ಇಲ್ಲ. ಅನನ್ಯ ಭಟ್ ಹುಟ್ಟು, ಬೆಳವಣಿಗೆ, ಶಾಲಾ ದಾಖಲಾತಿ, ಕಾಲೇಜು ದಾಖಲಾತಿ, ಎಂಬಿಬಿಎಸ್ ಅಡ್ಮಿಷನ್ ಬಗ್ಗೆಯೂ ಯಾವುದೇ ದಾಖಲಾತಿಯೂ ಇಲ್ಲ. ಹೀಗಾಗಿ ಅನನ್ಯ ಭಟ್ ಎಂಬ ಮಗಳು ತಮಗೆ ಇದ್ದಳು ಎಂಬುದನ್ನು ಸಾಬೀತುಪಡಿಸುವುದೇ ಸುಜಾತ ಭಟ್ ಗೆ ಕಷ್ಟವಾಗಿದೆ. ಜೊತೆಗೆ ತಮಗೆ ಬೆಂಬಲ ನೀಡಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ಈ ಹಿಂದೆ ಬೆಂಬಲ ಕೊಟ್ಟವರು ಈಗ ತಮ್ಮದೇ ಆದ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಜೊತೆಗೆ ಈಗ ಸುಜಾತ ಭಟ್ ರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕಾನೂನು ಹೋರಾಟಕ್ಕೆ ಯಾರ ಬೆಂಬಲವೂ ಸಿಗುತ್ತಿಲ್ಲ. ಹಿಂದಿನ ಬೆಂಬಲವೂ ಈಗ ಕಾನೂನು ಹೋರಾಟಕ್ಕೆ ಸಿಗುತ್ತಿಲ್ಲ. ಇದೆಲ್ಲದರಿಂದ ಸಂಕಷ್ಟಕ್ಕೆ ಸಿಲುಕಿರುವ ಸುಜಾತ ಭಟ್, ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಜುಲೈ 20 ರಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ನೀಡಿದ್ದ ಲಿಖಿತ ದೂರು ಅನ್ನೇ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.

ಆದರೇ, ಪೊಲೀಸರು ಈಗ ಅನನ್ಯ ಭಟ್ ಬಗ್ಗೆ ತನಿಖೆ ಕೈ ಬಿಡ್ತಾರಾ, ಸುಜಾತ ಭಟ್ ಹೀಗೆ ದೂರು ನೀಡಲು ಕಾರಣರಾದವರು ಯಾರು ಅನ್ನೋದರ ಬಗ್ಗೆಯೇ ಗಮನ ಕೇಂದ್ರೀಕರಿಸಿ ತನಿಖೆ ನಡೆಸುತ್ತಾರ ಎನ್ನುವ ಕುತೂಹಲ ಇದೆ. ಅನನ್ಯ ಭಟ್ ನಾಪತ್ತೆ ಕೇಸ್ ಅನ್ನು ಕೂಡ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಈಗಾಗಲೇ ಎಸ್‌ಐಟಿಗೆ ವರ್ಗಾಯಿಸಿದ್ದಾರೆ. ಈಗ ಎಸ್‌ಐಟಿ ಏನ್ ಮಾಡುತ್ತೆ ಎಂಬ ಕುತೂಹಲ ಇದೆ. ಸುಳ್ಳು ದೂರು ನೀಡುವುದು ಕೂಡ ಅಪರಾಧ. ಹೀಗಾಗಿ ದೂರು ನೀಡಿದ ಸುಜಾತ ಭಟ್ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲ ಇದೆ.

Related Articles

Back to top button