ಇತರೆ

ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿದ್ದ ಅನನ್ಯಾ ಭಟ್ ಫೋಟೋ ಆಕೆಯದ್ದಲ್ಲ?..ಈ ಪೋಟೋ ಯಾರದ್ದು! 

Views: 170

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸುಜಾತಾ ಭಟ್ ತನ್ನ ಮಗಳು 2003ರಲ್ಲಿ ಅನನ್ಯ ಭಟ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿದ್ದು ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿದ್ದಾಳೆ ಎಂದು ಸುಜಾತ ಭಟ್ ದೂರ ನೀಡಿದ್ದರು.

ಎಸ್.ಐ.ಟಿ.ಗೆ ದೂರು ನೀಡುವ ವೇಳೆ ಮಗಳ ಫೋಟೋ ಇಲ್ಲ ಎಂದಿದ್ದರು. ಇದಾದ ಬಳಿಕ ಕಳೆದ ಕೆಲವು ದಿನಗಳ ಹಿಂದೆ ಅನನ್ಯಾ ಭಟ್ ಎನ್ನಲಾದ ಓರ್ವ ಯುವತಿಯ ಫೋಟೋವನ್ನು ನ್ಯಾಯವಾದಿ ಮಂಜುನಾಥ್ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಅದು ಸುಜಾತಾ ಭಟ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದ ರಂಗಪ್ರಸಾದ್ ಅವರ ಸೊಸೆ ವಾಸಂತಿಯದ್ದು ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

ವಾಸಂತಿ ಅವರು 2007ರಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ. ಅದೇ ಫೋಟೋವನ್ನು ಸುಜಾತಾ ಅವರು ತನ್ನ ಮಗಳು ಅನನ್ಯಾ ಭಟ್ ಎಂದು ಹೇಳಿಕೊಂಡಿದ್ದಾರೆ. ಅವರನ್ನು ಗುರುತಿಸಲು ಅವರೆಲ್ಲರೂ ಮೃತಪಟ್ಟಿದ್ದಾರೆ. ಹಾಗಾಗಿ ವಾಸಂತಿಯ ಕಾಲೇಜು ದಿನಗಳ ಫೋಟೋ ಸಂಗ್ರಹಿಸಿ ಸುಜಾತಾ ಭಟ್‌ ನೀಡುವ ಮೂಲಕ ಅನನ್ಯಾ ಭಟ್ ಎಂದು ಸುಳ್ಳುಮಾಹಿತಿ ನೀಡಿರುವುದಾಗಿ ಮೂಲವನ್ನು ಹುಡುಕಿದಾಗ ಬೆಳಕಿಗೆ ಬಂದಿದೆ ಎನ್ನಲಾಗಿದೆ.

 

Related Articles

Back to top button