ಕರ್ಕುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Views: 43
ಕನ್ನಡ ಕರಾವಳಿ ಸುದ್ದಿ: ಕರ್ಕುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯೊಂದಿಗೆ ಆಚರಿಸಲಾಯಿತು.
ಗ್ರಾಮಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಿಜ್ರಿ ರಾಜೀವ ಶೆಟ್ಟಿ ಇವರು ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ನಮ್ಮ ಶಾಲಾ SDMC ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಆಚಾರ್ , ಗ್ರಾ.ಪಂ ಉಪಾಧ್ಯಕ್ಷರಾದ ಕುಮಾರಿ ನಾಗರತ್ನ, ಸೌಕೂರು ದೇವಾಲಯದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ಅಶೋಕ್ ಶೆಟ್ಟಿ ಜಾಡ್ಕಟ್ಟು,ಕರ್ಕುಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ಬಾಂಡ್ಯ, ಗ್ರಾ. ಪಂ. ಸದಸ್ಯರಾದ ಶ್ರೀ ನಾಗರಾಜ ಶೆಟ್ಟಿ, ಸಂತೋಷ್ ಪೂಜಾರಿ ಮುಕ್ಕೋಡು, ಸತೀಶ್ ಪೂಜಾರಿ ಹಿಲ್ಕೋಡು, ಸಾಧು ಪೂಜಾರ್ತಿ, ನಸೀಮಾ, ಹಿರಿಯರಾದ ಶ್ರೀ ಮಹಮ್ಮದ್ ಸಾಹೇಬ್, ಶ್ರೀ ನಾರಾಯಣ ನಾಯಕ್, ದಾನಿಗಳಾದ ಶ್ರೀ ಜಯಸೂರ್ಯ ಪೂಜಾರಿ, ಶ್ರೀ ನಾಗರಾಜ್ ಬಾಳಿಗ, ಶ್ರೀಕೃಷ್ಣ ಪೈಪ್ ಇಂಡಸ್ಟ್ರೀಸ್ ಮಾಲಕರದ ಶ್ರೀ ರಾಜೇಶ್ ನಾಯಕ್, ಶ್ರೀ ಶಂಕರ್ ಪೂಜಾರಿ ಗೆದ್ದೇಮನೆ, ಹಳೇವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಉದಯ ಬಟ್ರಾಡಿ, CRP ಗಳಾದ ಶ್ರೀ ರವಿಚಂದ್ರ, ಶ್ರೀ ಸುಧಾಕರ್ ಶೆಟ್ಟಿ ಹುಣಸೇಮನೆ,SDMC ಉಪಾಧ್ಯಕ್ಷೆ ಶ್ರೀಮತಿ ರೇಖಾ, ಮುಖ್ಯ ಶಿಕ್ಷಕರಾದ ಶ್ರೀ ನಾರಾಯಣ ಕೊಠಾರಿ,SDMC ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಸದಸ್ಯರು, ಶಾಲೆಯ ಶಿಕ್ಷಕ -ಶಿಕ್ಷಕೇತರ ವೃಂದ,ಪೋಷಕರು, ಹಳೆವಿದ್ಯಾರ್ಥಿಗಳು, ಅಡುಗೆಯವರು ಅಂಗನವಾಡಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.