ಧಾರ್ಮಿಕ
ಬೈಂದೂರು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಬನದಲ್ಲಿ ನಾಗರ ಪಂಚಮಿ ಪೂಜೆ

Views: 39
ಕನ್ನಡ ಕರಾವಳಿ ಸುದ್ದಿ: ಬೈಂದೂರಿನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ನಾಗ ಬನದಲ್ಲಿ ನಾಗರ ಪಂಚಮಿ ಹಬ್ಬದ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಅರ್ಚಕರಾದ ರಾಜು ಭಟ್ಟರು ನಾಗದೇವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಶ್ರೀಮತಿ ಇಂದಿರಾ ಸುದರ್ಶನ ಗಾಣಿಗ ಹಾಗೂ ಸದಸ್ಯರಾದ ಶೇಖರ್ ಬೈಂದೂರು ಪ್ರಸನ್ನ ದೇವಾಡಿಗ ಬೈಂದೂರು, ಯೋಗೇಂದ್ರ ಗಾಣಿಗ ಹಾಗೂ ಭಕ್ತವೃಂದದವರು ಉಪಸ್ಥಿತರಿದ್ದರು.






