ವಿಶ್ವ ಚೆಸ್ ದಿನಾಚರಣೆ:ಮದರ್ ತೆರೆಸಾ ಮೆಮೋರಿಯಲ್ ಶಿಕ್ಷಣ ಸಂಸ್ಥೆಯಲ್ಲಿ ಚೆಸ್ ಚಾಂಪಿಯನ್ ಷಿಪ್ ಸ್ಪರ್ಧೆ – ಚದುರಂಗದಲ್ಲಿ ಚತುರತೆ ಮೆರೆದ ವಿದ್ಯಾರ್ಥಿಗಳು

Views: 279
ಕನ್ನಡ ಕರಾವಳಿ ಸುದ್ದಿ: ವಿಶ್ವ ಚೆಸ್ ದಿನದ ಪ್ರಯುಕ್ತ ಮದರ್ ತೆರೆಸಾ ಮೆಮೋರಿಯಲ್ ಶಿಕ್ಷಣ ಸಂಸ್ಥೆಯಲ್ಲಿ 20-07-2025 ರಂದು ಚೆಸ್ ಚಾಂಪಿಯನ್ ಷಿಪ್ ನ್ನು ಆರರಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಉಡುಪಿ ಇವರ ಸಹಯೋಗದೊಂದಿಗೆ ಅದ್ದೂರಿಯಾಗಿ ನಡೆಸಲಾಯಿತು.
ಕಾರ್ಯಕ್ರಮವು ಆರನೇ ತರಗತಿಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ನಡೆಸಿಕೊಡಲು ಶ್ರೀ ನಾರಾಯಣ ಗುರು ಚೆಸ್ ಸ್ಕೂಲ್, ಉಡುಪಿಯ ಶ್ರೀಯುತ ಸಾಕ್ಷಾತ್ ಮತ್ತು ಶ್ರೀಯುತ ರಾಹುಲ್ ಆಗಮಿಸಿದ್ದರು.
ಕಾರ್ಯಕ್ರಮವನ್ನು ಅಧಿಕೃತವಾಗಿ ಶಾಲೆಯ ಆಡಳಿತ ಮಂಡಳಿಯವರು, ಅತಿಥಿಗಳು ಹಾಗೂ ಇಂದಿನ ಚೆಸ್ ಚಾಂಪಿಯನ್ ಶಿಪ್ ನ ಉಸ್ತುವಾರಿ ಹೊತ್ತ ಶ್ರೀಯುತ ಸತೀಶ್ ದೈಹಿಕ ಶಿಕ್ಷಣ ಶಿಕ್ಷಕರು ಚದುರಂಗದ ಕಾಯಿಗಳನ್ನ ನಡೆಸುವ ಮೂಲಕ ಉದ್ಘಾಟಿಸಿದರು. ಈ ವಿಶಿಷ್ಟ ಉದ್ಘಾಟನೆಯು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ನೀಡಿತು.
ಶ್ರೀ ನಾರಾಯಣ ಗುರು ಸ್ಕೂಲ್ ನ ತರಬೇತುದಾರರಾಗಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಸ್ಪರ್ಧಿಗಳನ್ನು ರಾಜ್ಯ ಅಂತರ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಗಳಲ್ಲಿ ವಿಜೇತರನ್ನಾಗಿಸಿದ ಉತ್ತಮ ಚೆಸ್ ತರಬೇತುದಾರರಾದ ಶ್ರೀಯುತ ಸಾಕ್ಷಾತ್ ಇವರು ಸ್ಪರ್ಧೆಯ ನಿಯಮಗಳನ್ನು ವಿವರಿಸಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತೀವ್ರ ಚಿಂತನೆ ತಾಳ್ಮೆ ಮತ್ತು ಕೌಶಲ್ಯದ ಮೂಲಕ ವಿಜೇತರಾಗಬಹುದು ಎಂಬ ಕಿವಿ ಮಾತನ್ನು ಹೇಳುತ್ತಾ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು.
ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ತೀಕ್ಷ್ಣ ಮನೋವಿಕಾಸ, ತಾರ್ಕಿಕ ಚಿಂತನೆ ಹಾಗೂ ಕೌಶಲ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ರೂಪಗೊಂಡಿದ್ದು ವಿವಿಧ ವಯೋಮಾನದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸುಕತೆಯಿಂದ ಭಾಗವಹಿಸಿದರು. ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಇವರು ಮಾತನಾಡುತ್ತಾ ” ಕ್ರೀಡಾ ಸ್ಪೂರ್ತಿಯಿಂದ ಆಡಬೇಕು ಮತ್ತು ಆಟದಲ್ಲಿ ಯಾವುದೇ ನಕಾರಾತ್ಮಕತೆ ಇರಬಾರದು ಎಂದು ನಲ್ನುಡಿಗಳನ್ನಾಡುತ್ತ ಶುಭ ಹಾರೈಸಿದರು.
ಇಂದಿನ ತರಗತಿವಾರು ಚೆಸ್ ಚಾಂಪಿಯನ್ ಶಿಪ್ ನಲ್ಲಿ 6ನೇ ತರಗತಿಯ ಸಾನ್ವಿತ.ಎಸ್. ಶೆಟ್ಟಿ ಪ್ರಥಮ ಪವನ್ ಉಡುಪ ದ್ವಿತೀಯ, ಸುಕ್ರಿ ಮೊಹಮ್ಮದ್ ಮೆಹರನ್ ತೃತೀಯ. ಏಳನೇ ತರಗತಿಯ ಸಾಕ್ಷಿತ್ ಶೆಟ್ಟಿ ಪ್ರಥಮ, ಸಿಂಧೂ ಮಧ್ಯಸ್ಥ ದ್ವಿತೀಯ,ವೈಷ್ಣವಿ ತೃತೀಯ, ಎಂಟನೇ ತರಗತಿಯ ಕಿಶನ್ ಶೆಟ್ಟಿ ಪ್ರಥಮ ಹೃತಿಕ್ ದ್ವಿತೀಯ,ಸುಶಾಂತ್ ಶೆಟ್ಟಿ ತೃತೀಯ. 9ನೇ ತರಗತಿಯ ಚರಿಷ್ಮಾ ಪ್ರಥಮ ವರ್ಷ. ಎ. ದ್ವಿತೀಯ ನಿಕಿತ್. ಪಿ. ತೃತೀಯ. ಹತ್ತನೇ ತರಗತಿಯ ಪ್ರೀತಮ್ ಪ್ರಥಮ, ನಿವೇದನ್ ದ್ವಿತೀಯ, ನಂದಶ್ರೀ ತೃತೀಯ ಸ್ಥಾನವನ್ನು ಪಡೆದುಕೊಂಡರು. ಪದವಿಪೂರ್ವ ವಿಭಾಗದಿಂದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಗಗನ್ ಪ್ರಥಮ ಸ್ಥಾನ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಗಗನ ದ್ವಿತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು. ಚೆಸ್ ಚಾಂಪಿನ ಕುರಿತು ಚೆಸ್ ಕ್ರೀಡೆ ಮಕ್ಕಳಲ್ಲಿ ಏಕಾಗ್ರತೆ ತಾಳ್ಮೆ ಮತ್ತು ತೀರ್ಮಾನ ಶಕ್ತಿಗಳನ್ನು ಬೆಳೆಸುತ್ತದೆ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಚಿಂತನ ಶಕ್ತಿಗೆ ಉತ್ತೇಜನ ನೀಡುತ್ತವೆ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಭಾಷಾ ಹಾಗೂ ಸಾಂಸ್ಕೃತಿ ನಿರ್ದೇಶಕಿಯಾದ ಅಲಿಟಾ ಡೇಸಾ ಇವರ ಉತ್ತಮ ನಿರೂಪಣೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು.