ಗಂಗೊಳ್ಳಿ-ಕುಂದಾಪುರ ನಡುವೆ ಬಾರ್ಜ್ ಸೇವೆಗೆ ಸಂಸದರಿಂದ ಒಪ್ಪಿಗೆ :ಗುರುರಾಜ್ ಗಂಟಿಹೊಳೆ

Views: 335
ಕನ್ನಡ ಕರಾವಳಿ ಸುದ್ದಿ:ಆರು ದಶಕಗಳಿಂದ ಕನಸಾದ ಸಿಗಂದೂರು ಸೇತುವೆ ನಿರ್ಮಾಣವಾಗಿ, ಇದೀಗ ಲೋಕಾರ್ಪಣೆಗೊಂಡಿದೆ. ಅಲ್ಲಿ ಎರಡು ಕಿ.ಮೀಟರ್ ನದಿ ದಾಟಲು ಇದ್ದ ಅಂಬಾರ ಕೊಡ್ಲು- ಕಳಸವಳ್ಳಿ ದಡಕ್ಕೆ ಇದೀಗ ಲಾಂಚ್ ವ್ಯವಸ್ಥೆ ಸ್ಥಗಿತಗೊಂಡಿದೆ.
ಗತ ವೈಭವಕ್ಕೆ ಸೇರಿದ ಸಿಗಂದೂರು ಲಾಂಚ್‌ನ್ನು ಗಂಗೊಳ್ಳಿ -ಕೋಡಿ ಮಧ್ಯೆ ಸಂಪರ್ಕದ ನದಿಗೆ ಬಳಸಿಕೊಂಡಾಗ ಕುಂದಾಪುರದ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬುವುದು ಇಲ್ಲಿನವರ ಆಶಯ
ಶ್ರೀ ಕ್ಷೇತ್ರ ಸಿಗಂದೂರು ಸಂಪರ್ಕಿಸಲು ಶರಾವತಿ ಹಿನ್ನಿರಿನಲ್ಲಿ ದೇಶದ ಎರಡನೇ ಅತಿ ಉದ್ದವಾದ ಕೇಬಲ್ ಸೇತುವೆ ನಿರ್ಮಾಣದ ನಂತರ ಅಲ್ಲಿ ಬಳಕೆಯಲ್ಲಿದ್ದ ಬಾರ್ಜ್ ಸೇವೆಯನ್ನು ಗಂಗೊಳ್ಳಿ-ಕುಂದಾಪುರ ನಡುವಿನ ಸಂಪರ್ಕಕ್ಕೆ ಬಳಸಬೇಕು ಎಂದು ಸಾರ್ವಜನಿಕರಿಂದ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ತಿಳಿಸಿದ್ದಾರೆ.
ಸಿಗಂದೂರು ಸಂಪರ್ಕಕ್ಕೆ ಬಳಸುತ್ತಿದ್ದ ಬಾರ್ಜ್ ಸೇವೆ ನೂತನ ಸೇತುವೆ ನಿರ್ಮಾಣದ ನಂತರ ನಿಲ್ಲಿಸಲಾಗಿದೆ. ಆ ಬಾರ್ಜ್ ಅನ್ನು ಗಂಗೊಳ್ಳಿ- ಕುಂದಾಪುರ ನಡುವೆ ಸಂಪರ್ಕ ಕಲ್ಪಿಸಲು ಪಂಚಗಂಗಾವಳ್ಳಿ ನದಿಗೆ ಒದಗಿಸಬೇಕು ಎಂದು ಸ್ಥಳೀಯರು ಹಲವು ರೀತಿಯಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಇದಕ್ಕೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.