ಜನಮನ

ಗತವೈಭವಕ್ಕೆ ಸೇರಿದ ಸಿಗಂದೂರು ಲಾಂಚ್‌ನ್ನು ಕುಂದಾಪುರದ ಕೋಡಿ-ಗಂಗೊಳ್ಳಿ ಸಂಪರ್ಕ ನದಿಗೆ ಬಳಕೆಯಾಗಲಿ! 

Views: 1803

ಕನ್ನಡ ಕರಾವಳಿ ಸುದ್ದಿ: ಆರು ದಶಕಗಳಿಂದ ಕನಸಾದ ಸಿಗಂದೂರು ಸೇತುವೆ ನಿರ್ಮಾಣವಾಗಿ, ಇದೀಗ ಲೋಕಾರ್ಪಣೆಗೊಂಡಿದೆ. ಅಲ್ಲಿ ಎರಡು ಕಿ.ಮೀಟರ್ ನದಿ ದಾಟಲು ಇದ್ದ ಅಂಬಾರ ಕೊಡ್ಲು- ಕಳಸವಳ್ಳಿ ದಡಕ್ಕೆ ಇದೀಗ ಲಾಂಚ್ ವ್ಯವಸ್ಥೆ ಸ್ಥಗಿತಗೊಂಡಿದೆ.

ಗತ ವೈಭವಕ್ಕೆ ಸೇರಿದ ಸಿಗಂದೂರು ಲಾಂಚ್‌ನ್ನು ಗಂಗೊಳ್ಳಿ -ಕೋಡಿ ಮಧ್ಯೆ ಸಂಪರ್ಕದ ನದಿಗೆ ಬಳಸಿಕೊಂಡಾಗ ಕುಂದಾಪುರದ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬುವುದು ಇಲ್ಲಿನವರ ಆಶಯ

ಗಂಗೊಳ್ಳಿ -ಕುಂದಾಪುರ ನಡುವೆ ಹರಿಯುತ್ತಿರುವ ಪಂಚಗಂಗಾವಳಿ ನದಿಗೆ ಅಡ್ಡಲಾಗಿ ನಡುವಿನ ಅಂತರ ಒಂದು ಕಿ.ಮೀಟರ್, ದೋಣಿಯಲ್ಲಿ ಸಾಗಿದರೆ 20 ನಿಮಿಷ ಕ್ರಮಿಸಬೇಕಾಗುತ್ತದೆ.  ಗಂಗೊಳ್ಳಿ ಮತ್ತು ಕೋಡಿಯಿಂದ ಪ್ರತಿದಿನ ಸಾವಿರಾರು ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾರೆ.

ಮೂರು ದಶಗಳ ಹಿಂದೆ ಕುಂದಾಪುರ- ಗಂಗೊಳ್ಳಿ ನಡುವಿನ ಸೇತುವೆ ಪ್ರಸ್ತಾವವಾಗುತ್ತಿದ್ದು ಇದೀಗ ನೆನೆಗುದಿಗೆ ಬಿದ್ದಿದೆ. ಬಸ್ ಮೂಲಕ ಗಂಗೊಳ್ಳಿಯಿಂದ ಕುಂದಾಪುರಕ್ಕೆ ಕ್ರಮಿಸಬೇಕಾದರೆ 16 ಕಿ.ಮೀ 45 ನಿಮಿಷ ಬೇಕಾಗುತ್ತದೆ. ಹೀಗೆ ಹೆಮ್ಮಾಡಿ ತಲ್ಲೂರಿನಿಂದ ಒಂದು ಸುತ್ತು ಹಾಕಿ ಕುಂದಾಪುರಕ್ಕೆ ಬರಬೇಕಾದರೆ ಒಂದು ಗಂಟೆಗಳಿಗಿಂತಲೂ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಪ್ರಸ್ತಾವಿತ ಸೇತುವೆ ನಿರ್ಮಾಣ ಆಗುವವರೆಗೆ ಸಿಗಂದೂರಿನ ಲಾಂಚ್ ಬಳಿಸಿದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ.

ಲಾಂಚ್ ನಿಂದ ಏನೇನು ಅನುಕೂಲ?

*ಯಾವುದೇ ಗಂಭೀರ ಅವಗಡ ಸಂಭವಿಸಿದಾಗ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ಕ್ಷಣಮಾತ್ರದಲ್ಲಿ ಬರಬಹುದು.

* ಗಂಗೊಳ್ಳಿಯಿಂದ ತಾಜಾ ಮೀನು ಕುಂದಾಪುರಕ್ಕೆ ಅತೀ ಶೀಘ್ರದಲ್ಲಿ ಜನರಿಗೆ ತಲುಪಲು ಸಾಧ್ಯ

*ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಬಹಳಷ್ಟು ಪ್ರಯೋಜನಕಾರಿ

*ಈಗಾಗಲೇ ಕುಂದಾಪುರದಲ್ಲಿ ರಿಂಗ್ ರೋಡ್ ಸಾಕಾರಗೊಂಡಿದೆ ಇದರಿಂದ ಗಂಗೊಳ್ಳಿಯಿಂದ ಕುಂದಾಪುರ ಸಂಪರ್ಕಕ್ಕೆ ಬಹಳಷ್ಟು ಅನುಕೂಲವಾಗಲಿದೆ.

*ಉದ್ದಿಮೆದಾರರಿಗೆ ಸರಕು ಸಾಗಾಣಿಕೆಗೆ ಅನುಕೂಲ

*ಪಿಯುಸಿ ನಂತರ ಉನ್ನತ ವ್ಯಾಸಂಗಕ್ಕೆ ಕುಂದಾಪುರದ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ಅನುಕೂಲ

*ಈ ಮಾರ್ಗದಲ್ಲಿ ಲಾಂಚ್ ಬಳಸಿಕೊಂಡರೆ ಹತ್ತು- ಹದಿನೈದು ನಿಮಿಷದಲ್ಲಿಯೇ ಕುಂದಾಪುರ ಸಂಪರ್ಕಿಸಲು ಸಾಧ್ಯ.

ಗತವೈಭವಕ್ಕೆ ಸೇರಿದ ಸಿಗಂದೂರು ಲಾಂಚ್‌ನ್ನು ಕೋಡಿ- ಗಂಗೊಳ್ಳಿ ನದಿ ಮಧ್ಯ ಬಳಸಿಕೊಳ್ಳಲು ಕ್ಷೇತ್ರದ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು.

Related Articles

Back to top button