ಅಮಾಸೆಬೈಲು, ಕೊಲ್ಲೂರು ಶಂಕರನಾರಾಯಣದಲ್ಲಿ ಪ್ರಕರಣ ದಾಖಲಾಗಿದ್ದ ಮೂವರು ನಕ್ಸಲರು ಕುಂದಾಪುರ ಕೋರ್ಟ್ ಗೆ ಹಾಜರ್

Views: 352
ಕನ್ನಡ ಕರಾವಳಿ ಸುದ್ದಿ: ಅಮಾಸೆಬೈಲು, ಕೊಲ್ಲೂರು ಶಂಕರನಾರಾಯಣದಲ್ಲಿ ಪ್ರಕರಣ ದಾಖಲಾಗಿದ್ದ ಮೂವರು ನಕ್ಸಲರನ್ನು ಕುಂದಾಪುರ ಕೋರ್ಟಿಗೆ ಹಾಜರುಪಡಿಸಲಾಗಿದೆ.
ಕೇರಳದ ವಿಯೂರು ಕಾರಾಗೃಹದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಅಲಿಯಾಸ್ ಉಷಾ ಹಾಗೂ ಬೆಂಗಳೂರಿನ ಕೇಂದ್ರ ಕಾರಾಗೃಹ ದಲ್ಲಿರುವ ವನಜಾಕ್ಷಿ ಅವರನ್ನು ವಾರಂಟ್ ಪಡೆದು, ನ್ಯಾಯಾಧೀಶರ ಎದುರು ಗುರುವಾರ ಬಿಗಿ ಭದ್ರತೆಯಲ್ಲಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಶಂಕರನಾರಾಯಣ, ಕೊಲ್ಲೂರು ಹಾಗೂ ಅಮಾಸೆಬೈಲು ಠಾಣೆ ವ್ಯಾಪ್ತಿಯಲ್ಲಿ ಕೃಷ್ಣಮೂರ್ತಿ ವಿರುದ್ಧ 7, ವನಜಾಕ್ಷಿ ವಿರುದ್ಧ 3 ಹಾಗೂ ಸಾವಿತ್ರಿ ವಿರುದ್ಧ 5 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳು ಖುದ್ದಾಗಿ ಬರಬೇಕು ಅನ್ನುವ ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಹಾಜರುಪಡಿಸಲಾಯಿತು. ಆ. 27ರಂದು ಪ್ರಕರಣದ ವಿಚಾರಣೆ ಆರಂಭವಾಗಲಿದೆ.
ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ನೇತೃತ್ವದ ಪೊಲೀಸರ ತಂಡ, ಬೆಂಗಳೂರಿನ ಕೇಂದ್ರ ಕಾರಾಗೃಹ ಹಾಗೂ ಕೇರಳದ ವಿಯೂರು ಕಾರಾಗೃಹದ ಅಧಿಕಾರಿಗಳ ತಂಡದ ಭದ್ರತೆಯಲ್ಲಿ ಆರೋಪಿಗಳನ್ನು ಕರೆತರಲಾಯಿತು.






