ಸಾಂಸ್ಕೃತಿಕ

ಶೂಟಿಂಗ್‌ ವೇಳೆ ಕಾರು ಪಲ್ಟಿಯಾಗಿ ಸ್ಟಂಟ್‌ಮ್ಯಾನ್‌ ಸ್ಥಳದಲ್ಲೇ ಸಾವು

Views: 157

ಕನ್ನಡ ಕರಾವಳಿ ಸುದ್ದಿ: ಆರ್ಯ ನಟನೆಯ ಹೊಸ ಸಿನಿಮಾದ ಶೂಟಿಂಗ್ ಮಾಡುವ ವೇಳೆ ಸ್ಟಂಟ್‌ಮ್ಯಾನ್‌ ಒಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದಿದೆ.

ತಮಿಳು ಸಿನಿ ರಂಗದ ಸಾಹಸ ಕಲಾವಿದ ರಾಜು ಎನ್ನುವರು ಸಾವನಪ್ಪಿದ್ದಾರೆ. ತಮಿಳು ಸಿನಿಮಾದ ಸ್ಟಾರ್ ನಟ ಆರ್ಯ ಅವರ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಕಾರು ಸ್ಟಂಟ್ ಮಾಡುವ ಸನ್ನಿವೇಶ ಇತ್ತು. ಇದಕ್ಕಾಗಿ ಸಾಹಸ ಕಲಾವಿದ ರಾಜು ಅವರಿಂದ ಕಾರು ಸ್ಟಂಟ್ ಮಾಡಿಸಲಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿ ಘಟನೆಯಲ್ಲಿ ಸ್ಟಂಟ್ ಮ್ಯಾನ್ ರಾಜು ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ತಮಿಳು ನಟ ವಿಶಾಲ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾನು, ರಾಜು ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್ ಗಳನ್ನು ಮಾಡಿದ್ದೇವೆ. ಅವರನ್ನು ಕಳೆದುಕೊಂಡಿರುವುದು ನಮಗೆ ತುಂಬಾ ದುಃಖ ತರಿಸಿದೆ. ಕಾರು ಉರುಳಿಸುವ ಸನ್ನಿವೇಶದ ಸ್ಟಂಟ್ ಮಾಡುವಾಗ ಈ ಘಟನೆ ನಡೆದಿದೆ. ತಮಿಳು ಸಿನಿ ರಂಗದಲ್ಲಿ ಕೆಲವು ವರ್ಷಗಳಿಂದ ರಾಜು ರಿಸ್ಕ್ ತೆಗೆದುಕೊಂಡು ಸ್ಟಂಟ್ ಗಳನ್ನು ಮಾಡುತ್ತಿದ್ದರು. ನಮ್ಮನ್ನು ಅಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ತಮಿಳು ಸಿನಿಮಾ ಶೂಟಿಂಗ್ಗಳಲ್ಲಿ ಸ್ಟಂಟ್ ಮಾಡುತ್ತಿದ್ದ ರಾಜು ಎಲ್ಲರಿಗೂ ಪರಿಚಿತರಾಗಿದ್ದರು. ಪಾ.ರಂಜೀತ್ ನಿರ್ದೇಶನದಲ್ಲಿ ಆರ್ಯ ಅವರು ನಟಿಸುತ್ತಿರುವ ಹೊಸ ಸಿನಿಮಾದ ಶೂಟಿಂಗ್ನಲ್ಲಿ ರಾಜು ಸ್ಟಂಟ್ ಮಾಡುವಾಗ ಇದು ನಡೆದಿದೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ. ಕಾರು ಎತ್ತರಕ್ಕೆ ಹಾರಬೇಕಾದ ಹೈ-ರಿಸ್ಕ್ ಆಕ್ಷನ್ ಸೀಕ್ವೆನ್ಸ್ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ನಡೆದ ಅವಘಡದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Related Articles

Back to top button