ಸಾಂಸ್ಕೃತಿಕ

ಖ್ಯಾತ ಭಾಗವತ ರಾಘವೇಂದ್ರ ಮಯ್ಯರಿಗೆ ಕಾಳಿಂಗ ನಾವಡ ಪ್ರಶಸ್ತಿ

Views: 52

ಕನ್ನಡ ಕರಾವಳಿ ಸುದ್ದಿ: ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಕಾಳಿಂಗ ನಾವಡರ ನೆನಪಿನಲ್ಲಿ ನೀಡುವ ‘ಕಲಾಕದಂಬ ಕಾಳಿಂಗ ನಾವಡ’ ಪ್ರಶಸ್ತಿಗೆ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ತೆಂಕು ಬಡಗಿನಲ್ಲಿ 42 ವರ್ಷಗಳಿಂದ ಯಕ್ಷಗಾನದ ಭಾಗವತರಾಗಿ ಕಲಾ ಸೇವೆ ಮಾಡುತ್ತಿರುವ ರಾಘವೇಂದ್ರ ಮಯ್ಯರಿಗೆ ಅಕ್ಟೋಬರ್ 12ರಂದು ಬನಶಂಕರಿ 3ನೇ ವಿಭಾಗದಲ್ಲಿನ ಚನ್ನಮ್ಮನ ಕೆರೆ ಅಚ್ಚುಕಟ್ಟುನಲ್ಲಿರುವ ಪರಂಪರ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಲಾಕದಂಬ ಆರ್ಟ್ ಸೆಂಟರ್ ನಿರ್ದೇಶಕ ರಾಧಾಕೃಷ್ಣ ಉರಾಳ ತಿಳಿಸಿದ್ದಾರೆ.

ಕಳೆದ 16 ವರ್ಷಗಳಿಂದ ಯಕ್ಷಗಾನ ಕ್ಷೇತ್ರದ ಪ್ರತಿಭಾನ್ವಿತರೊಬ್ಬರನ್ನು ಆಯ್ಕೆ ಮಾಡಿ ಕಾಳಿಂಗ ನಾವಡ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ರೂ. 25,000 ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

 

 

Related Articles

Back to top button