ಐದು ಭಾಷೆಯಲ್ಲಿ ತೆರೆಕಂಡ 3ಡಿ ಚಿತ್ರ “ಆದಿಪುರುಷ”

Views: 1
ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ ಇಂದು ತೆರೆಕಂಡಿದೆ.
ತೀವ್ರ ಕುತೂಹಲ ಹುಟ್ಟಿಸಿದ ಚರ್ಚೆಯಲ್ಲಿದ್ದ ಈ ಸಿನಿಮಾ ಜಾಗತಿಕವಾಗಿ 700ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.
ರಾಮಾಯಣದ ಸೀತಾಪರಣದ ಕಥೆಯನ್ನು ಇದು ಹೊಂದಿದ್ದು, ವಿ ಎಫ್ ಎಕ್ಸ್ ಬಳಸಿರುವ ಹಳೆಯ ಕಥೆಯನ್ನು ಆಧುನಿಕವಾಗಿ ಮನ ಮುಟ್ಟಿಸುತ್ತಿರುವ ಆದಿಪುರುಷ ರಾಮನ ಪಾತ್ರದಲ್ಲಿ ಅಭಿನಯಿಸುತ್ತಿರುವ ಪ್ರಭಾಸ್ ಹಾಗೂ ರಾವಣ ಪಾತ್ರದಲ್ಲಿ ಅಭಿನಯಿಸಿರುವ ಸೈಫಾಲಿಖಾನ್ ಅವರ ಪಾತ್ರಗಳಿಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ.
ಮೈನವಿರೇಳಿಸುವ ದೃಶ್ಯಗಳೊಂದಿಗೆ ರಾಮ ತನ್ನ ವಾನರ ಸೇನೆಯೊಂದಿಗೆ ಲಂಕೆಗೆ ನುಗ್ಗಿ ಸೀತೆಯನ್ನು ರಕ್ಷಿಸಿ ಕರೆತರುವುದು ,ಒಳ್ಳೆಯದನ್ನ ಗೆದ್ದಿದೆ ಕೆಟ್ಟದ್ದನ್ನು ಸೋಲುತ್ತಿದೆ ಎಂಬ ಪ್ರಯತ್ನ ಯಶಸ್ವಿಯಾಗಿದೆ.
ಹಿಂದಿ, ತೆಲುಗು, ತಮಿಳು, ಕನ್ನಡ,ಮಲಾಯಾಳಂ ನಲ್ಲಿ ತೆರೆಕಂಡಿದೆ. ಓಂ ರಾವತ್ ನಿರ್ದೇಶಿಸಿರುವ ಆದಿಪುರುಷ ಸಿನಿಮಾವು ಬಿಗ್ ಬಜೆಟ್ ಚಿತ್ರವಾಗಿದ್ದು, ಪ್ರಭಾಸ್, ಸೈಫ್ ಅಲಿಖಾನ್, ಕೃತಿ ಸನೋನ್, ಸನ್ನಿಸಿಂಗ್, ದೇವದತ್ತ ನಾಣಿ ನಟಿಸಿದ್ದಾರೆ.






