ಮಾಲಾಡಿಯಲ್ಲಿ 8ನೇ ಚಿರತೆ ಬೋನಿನಲ್ಲಿ ಸೆರೆ

Views: 2
ಕುಂದಾಪುರ : ತಾಲೂಕಿನ ತೆಕ್ಕಟ್ಟೆ ಸಮೀಪ ಮಾಲಾಡಿ ಎಂಬಲ್ಲಿ ಹಲವು ದಿನಗಳಿಂದ ಚಿರತೆ ದಾಳಿಯಿಂದ ಭಯಭೀತಿ ಹುಟ್ಟಿಸಿದ ದೊಡ್ಡ ಚಿರತೆಯನ್ನು ಮಂಗಳವಾರ ರಾತ್ರಿ ಬೋನಿನಲ್ಲಿ ಸೆರೆಯಾಗಿದೆ
2018 ರಿಂದ ಇಲ್ಲಿಯವರೆಗೆ ಇದೇ ಪರಿಸರದ ವಠಾರದಲ್ಲಿ ಎಂಟು, ಇದೀಗ ಒಂದೇ ಸ್ಥಳದಲ್ಲಿ ಐದನೇ ಚಿರತೆಯನ್ನು ಮಂಗಳವಾರ ಅರಣ್ಯ ಇಲಾಖೆಯವರು ಬೋನಿನಲ್ಲಿ ಸೆರೆ ಹಿಡಿದಿದ್ದಾರೆ.

ಈ ಹಿಂದೆ ಗುರುರಾಜ್ ಗಾಣಿಗ ಅವರ ಮನೆಯ ನಾಯಿಯನ್ನು ಹೊತ್ತೈದು ಇಲ್ಲಿನ ದನ ಕರುಗಳ ಮೇಲೆ ದಾಳಿ ಮಾಡಿದ್ದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದು, ಸಂಜೆಯಾಗುತ್ತಲೇ ಈ ಪರಿಸರದಲ್ಲಿ ತಿರುಗಾಡಲು ಜನರು ಭಯಭೀತರಾದ ಕಾರಣ ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದಾರೆ.
ಅರಣ್ಯ ಇಲಾಖೆಯವರು ಹಲವಾರು ದಿನಗಳಿಂದ ಬೋನನ್ನು ಇಟ್ಟು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಇದೇ ಪರಿಸರದ ವಕ್ವಾಡಿ,ಕಾಳಾವರ, ಕೆದೂರು, ಮಾಲಾಡಿ ಎಂಬಲ್ಲಿ ಹಲವು ದಿನಗಳಿಂದ ಕಪ್ಪು ಚಿರತೆ ಕಾಣಿಸಿಕೊಂಡಿದ್ದು ಇಲ್ಲಿನ ಜನರು ಮತ್ತಷ್ಟು ಭಯಭೀತರಾಗಿ, ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಗೆ ಮೊರೆ ಹೋಗಿದ್ದಾರೆ.

ಚಿತ್ರ ಕೃಪೆ: ರವಿ ತೆಕ್ಕಟ್ಟೆ.






