ಕರಾವಳಿ
ಉಡುಪಿ : ಶಕ್ತಿ ಯೋಜನೆ ಉದ್ಘಾಟಿಸಿದ ಲಕ್ಷ್ಮಿ ಹೆಬ್ಬಾಳ್ಕರ್

Views: 0
ಉಡುಪಿ; ದೀಪ ಬೆಳಗಿಸುವ ಮೂಲಕ ಶಕ್ತಿ ಯೋಜನೆಯನ್ನು ಉಡುಪಿ ಕೆಎಸ್ಆರ್ಟಿಸಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದರು .
ನಂತರ ಅವರು ಮಹಿಳೆಯರಿಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿ, ಬಸ್ ನ ಮೊದಲ ಸೀಟಿನಲ್ಲಿ ಸಚಿವೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಕುಳಿತು ಪ್ರಯಾಣಿಸಿದರು.
ಕಾರ್ಕಳ ಮಾರ್ಗದ ಸರ್ಕಾರಿ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರರೊಂದಿಗೆ ಉಡುಪಿ ನಗರವನ್ನು ಸಂಚಲಿಸಿದರು.ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಜಿಲ್ಲಾಧಿಕಾರಿ ಕೂಮ೯ರಾವ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಇನ್ನಿತರರು ಇದ್ದರು






