ಇತರೆ

ರಸ್ತೆ ಕುಸಿದು ಬೃಹತ್ ಗುಂಡಿಗೆ ಕಾರು ಉರುಳಿ ಬಿದ್ದು ಭಾರಿ ಅವಘಡ 

Views: 132

ಕನ್ನಡ ಕರಾವಳಿ ಸುದ್ದಿ:ಭಾರಿ ಮಳೆಯಿಂದಾಗಿ ನಗರದ ಟೈಡಲ್ ಪಾರ್ಕ್ ಬಳಿ ರಸ್ತೆ ಕುಸಿದು ಬೃಹತ್ ಗುಂಡಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕ್ಯಾಬ್ ಗುಂಡಿಗೆ ಉರುಳಿ ಭಾರಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ನಿನ್ನೆ ಸಂಜೆ 6.30ಕ್ಕೆ ಒಳಚರಂಡಿ ಕೊಳವೆಯಲ್ಲಿ ಸೋರಿಕೆಯಾದ ಕಾರಣ ರಸ್ತೆ ಕುಸಿದು ಕಾರು ಗುಂಡಿಯೊಳಗೆ ಉರುಳಿದೆ ಎಂದು ಚೆನ್ನೈ ಮೆಟ್ರೋ ರೈಲು ತಿಳಿಸಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರು ಮತ್ತು ಮೆಟ್ರೋ ರೈಲು ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. ರಸ್ತೆ ಕುಸಿತದಿಂದಾಗಿ ರಾಜೀವ್ ಗಾಂಧಿ ಸಲೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

ಚೆನ್ನೈನ ಟೈಡಲ್ ಪಾರ್ಕ್‌ ಸಿಗ್ನಲ್ ಬಳಿ ರಸ್ತೆಯೊಂದು ಕುಸಿದು ಆಳವಾದ ಹೊಂಡ ಉಂಟಾಯಿತು. ಅದರಲ್ಲಿ ಐವರು ಪ್ರಯಾಣಿಕರಿದ್ದ ಟ್ಯಾಕ್ಸಿಯೊಂದು ಬಿದ್ದಿದೆ. ಟ್ಯಾಕ್ಸಿ ಚಾಲಕ ವಿಶ್ಲೇಶ್ (40) ಶೋಲಿಂಗನಲ್ಲೂರಿನಿಂದ ಸಾಫ್ಟ್‌ವೇ‌ರ್ ಕಂಪನಿಯ ಉದ್ಯೋಗಿ ವಿಶ್ಲೇಶ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಸೆಂಟ್ರಲ್ ರೈಲ್ವೆ ನಿಲ್ದಾಣದ ಕಡೆಗೆ ಹೋಗುತ್ತಿದ್ದರು. ಸಿಗ್ನಲ್ ಬಳಿ ಹೋಗುವಾಗ ರಸ್ತೆ ಇದ್ದಕ್ಕಿದ್ದಂತೆ ಕುಸಿದು ಟ್ಯಾಕ್ಸಿ ಹೊಂಡಕ್ಕೆ ಬಿದ್ದಿದೆ.

ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು ಮತ್ತು ಇತರ ವಾಹನ ಸವಾರರು ತಕ್ಷಣವೇ ರಕ್ಷಣೆಗೆ ಧಾವಿಸಿದರು. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಗುತ್ತಿಗೆದಾರರ ಸಹಾಯದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು.

Related Articles

Back to top button