ಕರಾವಳಿ
ರಾಜ್ಯಕ್ಕೆ ಮುಂಗಾರು : ಕುಂದಾಪುರದ್ಯಾಂತ ಗುಡುಗು ಸಹಿತ ಮಳೆ

Views: 0
ಕುಂದಾಪುರ : ರಾಜ್ಯದ ಕರಾವಳಿಗೆ ಶನಿವಾರ ನೈರುತ್ಯ ಮುಂಗಾರು ಪ್ರವೇಶ ಪಡೆದಿದ್ದು, ಮುಂದಿನ ನಾಲ್ಕು ದಿನ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಕರಾವಳಿಯಲ್ಲಿ ತಾಸಿಗೆ 40 ರಿಂದ 45 ಕಿ. ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರದಲ್ಲಿ ಅಲೆಗಳು ಅಬ್ಬರ ಹೆಚ್ಚಿರುವ ಕಾರಣ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆ : ಶನಿವಾರ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಕಾಕ೯ಳ, ಕುಂದಾಪುರ, ಉಡುಪಿ, ಬ್ರಹ್ಮಾವರ, ಕಾಪು, ಪಡುಬಿದ್ರಿ ಸುತ್ತಮುತ್ತ ಮಳೆಯಾಗಿದೆ.
ಕುಂದಾಪುರ ಗುಡುಗು ಸಹಿತ ಮಳೆ : ಶುಕ್ರವಾರ ರಾತ್ರಿಯಿಂದ ಆರಂಭಗೊಂಡ ಮಳೆ ಶನಿವಾರವೂ ಮುಂದುವರಿದು ಬೈಂದೂರು, ವಂಡ್ಸೆ, ಕೊಲ್ಲೂರು, ಗಂಗೋತ್ರಿ, ಸಿದ್ದಾಪುರ,ಹೊಸಂಗಡಿ ಸೇರಿದಂತೆ ತಾಲೂಕಿನಾದ್ಯಂತ ಬಹುತೇಕ ಎಲ್ಲಾ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.






