ಕರಾವಳಿ
ಕೊಲ್ಲೂರು : ಭಕ್ತರ 4.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Views: 102
ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದಶ೯ನಕ್ಕೆ ಆಗಮಿಸಿದ ಭಕ್ತರಾದ ಕೇರಳದ ಕಾಸರಗೋಡು ಹಣಂಗೋಡಿನ ದಂಪತಿಗಳ ವ್ಯಾನಿಟಿ ಬ್ಯಾಗ್ ನಲ್ಲಿ ಚಿಕ್ಕ ಪಸ್೯ ನಲ್ಲಿ ಇಟ್ಟಿದ್ದ ಹದಿಮೂರುವರೆ ಚಿನ್ನಾಭರಣ ಕಳವು ಆದ ಪ್ರಕರಣ ಕೊಲ್ಲೂರು ಠಾಣೆಯಲ್ಲಿ ದಾಖಲಾಗಿದೆ.
ದೇವರ ದಶ೯ನ ಮುಗಿಸಿ ಹೊರಗಡೆ ಬಂದು ಬ್ಯಾಗ್ ತೆರೆದಿರುವುದನ್ನು ಗಮನಿಸಿದಾಗ ಪಸ್೯ ಕಾಣೆಯಾಗಿದ್ದು, ಅದರಲ್ಲಿದ್ದ ಏಳೂವರೆ ಪವನ್ ಚಿನ್ನದ ಚೈನ್, ಎರಡು ಚಿನ್ನದ ಬಳೆ, ನಾಲ್ಕು ಕಿವಿಯೊಲೆ ಸಹಿತ ಹದಿಮೂರುವರೆ ಚಿನ್ನಾಭರಣದ ಒಟ್ಟು ಮೌಲ್ಯ 4.75 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.






