ಕ್ರೀಡೆ

ಮುರಿದು ಬಿತ್ತು  ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಪ್ರೀತಿ 

Views: 175

ಕನ್ನಡ ಕರಾವಳಿ ಸುದ್ದಿ: ಶುಭ್‌ಮನ್ ಗಿಲ್ ಮತ್ತು ಸಾರಾ ಜೋಡಿ ಹಕ್ಕಿಗಳು ಎನ್ನುವ ಮಾತು ಇಂದು ನಿನ್ನೆಯದಲ್ಲ. ಅನೇಕ ದಿನಗಳಿಂದ ಕೇಳಿ ಬರುತ್ತಾನೇ ಇದೆ. ಇದಕ್ಕೆ ಪೂರಕವಾಗಿ ಇಬ್ಬರು ಕ್ಯಾಮರಾ ಕಣ್ಣಿನಲ್ಲಿ ಅನೇಕ ಬಾರಿ ಸೆರೆಯಾಗಿದ್ಧಾರೆ ಕೂಡ. ಆದರೆ ಈಗ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವೆ ಇದ್ದ ಪ್ರೀತಿ ಮುರಿದು ಬಿದ್ದಿದೆ ಎನ್ನುವ ಸುದ್ದಿ ಹಬ್ಬಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಶುಭಮನ್ ಗಿಲ್ ಮತ್ತು ಸಾರಾ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ.

ಇನ್ನು ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡುತ್ತಿದ್ದಂತೆಯೇ ಇವರ ಇಬ್ಬರ ಸಂಬಂಧ ಮುರಿದು ಬಿದ್ದಿದ್ದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಕಾರಣ ಹುಡುಕುವ ಕೆಲಸ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅವನೀತ್ ಕೌರ್ ಮೇಲೆ ಅನೇಕರಿಗೆ ಅನುಮಾನ ಮೂಡಿದೆ.

ಹೌದು, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಡ್ಯಾನ್ಸ್ ಕೇ ಸೂಪರ್ ಸ್ಟಾರ್ಸ್, ಝಲಕ್ ದಿಖಲಾ ಜಾ, ಹೀಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಸ್ಫರ್ಧಿಯಾಗಿ ಕಾಣಿಸಿಕೊಂಡಿದ್ದ ಅವನೀತ್ ಕೌರ್ ಸದ್ಯ ಬಾಲಿವುಡ್‌ನಲ್ಲಿ ನಾಯಕಿಯಾಗಿ ನೆಲೆಯೂರುವ ಪ್ರಯತ್ನ ಮಾಡುತ್ತಿದ್ದಾರೆ.

ಮರ್ದಾನಿ, ಟಿಕು ವೆಡ್ಸ್ ಶೆರು, ಲವ್ ಕೀ ಅರೆಂಜ್ ಮ್ಯಾರೇಜ್, ಸೇರಿ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅವನೀತ್ ಕೌರ್ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಜೊತೆ ಮಿಷನ್ ಇಂಪಾಸಿಬಲ್‌ನಲ್ಲಿ ಕೂಡ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಇನ್ನೇನು ಈ ವರ್ಷ ತೆರೆಗೆ ಬರಲಿದೆ.

ಇಂಥಾ ಅವನೀತ್ ಕೌರ್ ಸದ್ಯ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವೆ ಬಂದಿದ್ದಾರೆ ಎನ್ನುವ ವಾದವನ್ನು ಅನೇಕರು ಮಂಡಿಸುತ್ತಿದ್ದಾರೆ.

Related Articles

Back to top button
error: Content is protected !!