ಸಾಂಸ್ಕೃತಿಕ

ಆಮೀರ್‌ ಖಾನ್‌ ಮೂರನೇ ಹೊಸ ಬಾಳ ಸಂಗಾತಿ ಬೆಂಗಳೂರಿನ ಗೌರಿ!

Views: 131

ಕನ್ನಡ ಕರಾವಳಿ ಸುದ್ದಿ: ಮಾ. 14ರಂದು ಬಾಲಿವುಡ್‌ ಸೂಪರ್‌ ಸ್ಟಾರ್‌ ಆಮೀರ್‌ ಖಾನ್ 60 ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂಬೈಯ ತಮ್ಮ ನಿವಾಸದಲ್ಲಿ ಸ್ನೇಹಿತರು, ಆತ್ಮೀಯರಿಗಾಗಿ ಪಾರ್ಟಿ ಆಯೋಜಿಸಿದ್ದರು. ಇದೇ ವೇಳೆ ಅವರು ಅಚ್ಚರಿಯ ಮಾಹಿತಿಯೊಂದನ್ನು ಹೊರಗೆಡಹಿದ್ದಾರೆ. ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಹೊಸ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ಈಗಾಗಲೇ 2 ಬಾರಿ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿರುವ ಅವರು, 60ನೇ ವಯಸ್ಸಿನಲ್ಲಿ ಮತ್ತೊಮ್ಮೆ ಲವ್‌ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆಮೀರ್‌ ಖಾನ್‌ ಈ ಹಿಂದೆ ರೀನಾ ದತ್ತಾ ಮತ್ತು ಕಿರಣ್‌ ರಾವ್‌ ಅವರನ್ನು ಮದುವೆಯಾಗಿದ್ದರು. ಬಳಿಕ ಎರಡೂ ಸಂಬಂಧದಿಂದ ದೂರವಾಗಿದ್ದರು.

ಆಮೀರ್‌ ಖಾನ್‌ ಅವರ ಪುತ್ರಿ ಐರಾ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ, ಪುತ್ರ ಜುನೈದ್‌ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಆಮೀರ್‌ ಖಾನ್‌ ತಮ್ಮ ಹೊಸ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ಆದರೆ ಅವರ ಫೋಟೊ ಕ್ಲಿಕ್‌ ಮಾಡದಂತೆ ಮಾಧ್ಯಮದವರಲ್ಲಿ ಮನವಿ ಮಾಡಿದ್ದಾರೆ.

ಆಮೀರ್‌ ಖಾನ್‌ ಅವರ ಪ್ರೇಯಸಿ ಹೆಸರು ಗೌರಿ. ಇವರು ಬೆಂಗಳೂರು ಮೂಲದವರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಆಮೀರ್‌ ಖಾನ್‌, ʼʼನಾನು ಗೌರಿಯನ್ನು ಮೊದಲು ಭೇಟಿಯಾಗಿದ್ದು 25 ವರ್ಷಗಳ ಹಿಂದೆ. ಈಗ ಅವರು ನನ್ನ ಸಂಗಾತಿ. ಈ ಸಂಬಂಧವನ್ನು ಇಬ್ಬರೂ ಗಂಭೀರವಾಗಿ ಪರಿಗಣಿಸಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಜತೆಯಾಗಿದ್ದೇವೆʼʼ ಎಂದು ವಿವರಿಸಿದ್ದಾರೆ.

ಗೌರಿ ಯಾರು?

ಆಮೀರ್‌ ಖಾನ್‌ ಹೊಸ ಪ್ರೇಯಸಿ ಗೌರಿ ಅವರಿಗೆ ಈ ಹಿಂದೆ ಮದುವೆಯಾಗಿದ್ದು, ಓರ್ವ ಮಗನಿದ್ದಾನೆ. ʼʼಗೌರಿ ಅವರ ಮಗನಿಗೆ ಈಗ 6 ವರ್ಷ. ಗೌರಿ ಪ್ರೊಡಕ್ಷನ್‌ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ನಾನು ಪ್ರತಿದಿನ ಹಾಡುತ್ತೇನೆʼʼ ಎಂದು ತಿಳಿಸಿದ್ದಾರೆ. ಅವರ ಸುರಕ್ಷತೆಯನ್ನು ಖಚಿತಪಡಿಸಲು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿರುವುದಾಗಿಯೂ ತಿಳಿಸಿದ್ದಾರೆ.

ಪಾರ್ಟಿಗೆ ಆಗಮಿಸಿದ ಶಾರುಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಅವರಿಗೂ ಆಮೀರ್‌ ಖಾನ್‌ ಗೌರಿಯನ್ನು ಪರಿಚಯಿಸಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಆಮೀರ್‌ ಖಾನ್‌ ಅವರ ಮಕ್ಕಳು ಮತ್ತು ಮಾಜಿ ಪತ್ನಿಯರೂ ಗೌರಿಯೊಂದಿಗೆ ಮಾತನಾಡಿದ್ದಾರೆ.

ರೀನಾ ದತ್ತಾ ಅವರನ್ನು 1986ರಲ್ಲಿ ವರಿಸಿದ್ದ ಆಮೀರ್‌ ಖಾನ್‌ 2002ರಲ್ಲಿ ದೂರವಾಗಿದ್ದರು. ಅದಾದ ಬಳಿಕ ನಿರ್ದೇಶಕಿ ಕಿರಣ್‌ ರಾವ್‌ ಅವರಿಂದಿಗೆ 2005ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸಂಬಂಧವೂ 2021ರಲ್ಲಿ ಮುರಿದು ಬಿದ್ದಿತ್ತು. ವಿಶೇಷ ಎಂದರೆ ಕಿರಣ್‌ ರಾವ್‌ ಅವರ ಮೂಲ ಬೆಂಗಳೂರು.

Related Articles

Back to top button