6 ಕೋಟಿ ರೂಪಾಯಿ ಮೌಲ್ಯದ ಕಿವಿಯೋಲೆಗಳನ್ನು ನುಂಗಿ ಪರಾರಿ:ಪತ್ತೆಯಾಗಿದ್ದು ಎಲ್ಲಿ?

Views: 186
ಕನ್ನಡ ಕರಾವಳಿ ಸುದ್ದಿ: ಟಿಫಿನಿ ಆ್ಯಂಡ್ ಕಂಪನಿಯ ಜ್ಯುವೆಲರಿ ಅಂಗಡಿಗೆ ನುಗ್ಗಿದ ಭೂಪನೊಬ್ಬ ಅಲ್ಲಿದ್ದ 6 ಕೋಟಿ ರೂಪಾಯಿ ಮೌಲ್ಯದ ಕಿವಿಯೋಲೆಗಳನ್ನು ನುಂಗಿ ಪರಾರಿಯಾದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.
ಆರೋಪಿಯನ್ನು ಜಾಯತನ್ ಲಾರೆನ್ಸ್ ಗ್ಲಿಡೆರ್ ಎಂದು ಗುರುತಿಸಲಾಗಿದೆ. 32 ವರ್ಷದ ಈ ಗ್ಲಿಡೆರ್ ಫೆಬ್ರವರಿ 26 ರಂದು ಟಿಫಿನನಿ ಆ್ಯಂಡ್ ಕಂಪನಿ ಎಂಬ ಜ್ಯುವೆಲಿರಿ ಶಾಪ್ಗೆ ಭೇಟಿ ನೀಡಿದ್ದ. ತುಂಬಾ ಶ್ರೀಮಂತನಂತೆ ಅಲ್ಲಿ ಪೋಸ್ ಕೂಡ ಕೊಟ್ಟಿದ್ದ. ಆದರೆ ವಜ್ರದ ಎರಡು ಜೊತೆ ಕಿವಿಯೋಲೆಗಳನ್ನು ಕದ್ದು ಓಡಿಹೋಗಿದ್ದಾನೆ. ಆನಂತರ ಅವುಗಳನ್ನು ನುಂಗಿದ್ದಾನೆ. 4.86 ಕ್ಯಾರೆಟ್ನ ಒಂದು ವಜ್ರದ ಓಲೆ ಅದರ ಮೌಲ್ಯ, ಸುಮಾರ 1.3 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಮತ್ತೊಂದು ಕಿವಿಯೋಲೆ 8.10 ಕ್ಯಾರೆಟ್ನ ವಜ್ರದ್ದು ಅದರ ಬೆಲೆ 5.3 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಗ್ಲಿಡೆರ್ ವಜ್ರದೋಲೆಗಳನ್ನು ಕದ್ದು ಓಡಿ ಹೋಗಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಒರ್ಲ್ಯಾಂಡೊ ಪೊಲೀಸರು ಈತನನ್ನು ಈಗಾಗಲೇ ಬಂಧಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇವನ ಮೇಲೆ ಈ ಹಿಂದೆ 10 ಪ್ರಕರಣಗಳು ದಾಖಲಾಗಿದ್ದು ಕೂಡ ಕಂಡು ಬಂದಿದೆ. ಆದ್ರೆ ಕಿವಿಯೋಲೆಗಳು ಸಿಗುವ ತನಕ ಆರೋಪಿಯ ವಿರುದ್ಧ ಪೊಲೀಸರು ರಾಬರಿ ಕೇಸ್ ದಾಖಲಿಸಿರಲಿಲ್ಲ. ಕೊನೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಡೀ ದೇಹವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ ನೋಡಿದಾಗ ಗ್ಲಿಡೆರ್ ಹೊಟ್ಟೆಯಲ್ಲಿ ಜೋಡಿ ವಜ್ರದೋಲೆಗಳು ಇರುವುದು ಕಂಡು ಬಂದಿದೆ.
ಇದಾದ ಮೇಲೆ ಪೊಲೀಸರು ಗ್ಲಿಡೆರ್ ಮೇಲೆ ರಾಬರಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಅಟ್ಟಿದ್ದಾರೆ. ಸದ್ಯ ಕಿವಿಯೋಲೆಗಳು ಜೀರ್ಣಕ್ರಿಯ ಮೂಲಕ ಆಚೆ ಬಂದಾಗ ಅವುಗಳನ್ನು ಕಲೆಕ್ಟ್ ಮಾಡಿ ಕೊಡಲಾಗುವುದು ಎಂದು ಚಿನ್ನಾಭರಣದ ಶಾಪ್ನವರಿಗೆ ತಿಳಿಸಲಾಗಿದೆ.