ಇತರೆ

ಮತ್ತೊಬ್ಬಳ ಜೊತೆ ತೋಟದ ಮನೆಯಲ್ಲಿದ್ದಾಗಲೇ ದುಷ್ಕರ್ಮಿಗಳಿಂದ ಕೊಲೆ!

Views: 305

ಕನ್ನಡ ಕರಾವಳಿ ಸುದ್ದಿ: ಮೈಸೂರಿನ ಅನುಗನಹಳ್ಳಿಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಿವಾಹಿತನಾಗಿದ್ದ ಈತ ಮತ್ತೊಬ್ಬಳ ಜೊತೆ ಲವಿ ಡವಿಯಲ್ಲಿದ್ದು, ಆಕೆಯ ಜೊತೆಗೆ ತೋಟದ ಮನೆಯಲ್ಲಿದ್ದಾಗಲೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿಯನ್ನು ಸೂರ್ಯ ಎಂದು ಗುರುತಿಸಲಾಗಿದ್ದು, ಪ್ರೇಯಸಿಯ ಮೇಲೂ ಕೊಲೆ ಅನುಮಾನ ಮೂಡಿದೆ.

ಮದುವೆಯಾಗಿದ್ದ ಸೂರ್ಯ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ತಿಳಿದು ಆತನ ಪತ್ನಿ ಮತ್ತು ತಾಯಿ ಮನೆ ಬಿಟ್ಟು ಹೋಗಿದ್ದರು. ಸೂರ್ಯ ಇನ್ ಸ್ಟಾಗ್ರಾಂನಲ್ಲಿ ಶ್ವೇತಾ ಎಂಬಾಕೆಯ ಜೊತೆ ಪರಿಚಯ ಮಾಡಿಕೊಂಡಿದ್ದಾನೆ. ನಂತರ ಅವರು ಒಟ್ಟಾಗಿ ಸುತ್ತುತ್ತಿದ್ದರು ಹಾಗೂ ಖಾಸಗಿ ಫೋಟೋಗಳನ್ನು ಸ್ಟೇಟಸ್‌ಗೆ ಹಾಕುತ್ತಿದ್ದರು.

ಮೊದಲು ಎಲ್ಲವೂ ಚೆನ್ನಾಗಿಯೇ ಇದ್ದರೂ ನಂತರ ಶ್ವೇತಾ ಆಸ್ತಿಗಾಗಿ ಪೀಡಿಸತೊಡಗಿದ್ದಾಳೆ. ನಿನ್ನೆ ರಾತ್ರಿ ಇಬ್ಬರೂ ತೋಟದ ಮನೆಯಲ್ಲಿ ಒಟ್ಟಾಗಿ ಇದ್ದರು. ಆದರೆ ಬೆಳಗಾಗುವಷ್ಟರಲ್ಲಿ ಸೂರ್ಯನ ಹತ್ಯೆಯಾಗಿದೆ. ಈ ಕೊಲೆಯನ್ನು ಶ್ವೇತಾಳೇ ಮಾಡಿದ್ದಾಳೆ ಎಂದು ಸೂರ್ಯನ ಕುಟುಂಬಸ್ಥರು ಆರೋಪಿಸಿದ್ದಾರೆ. ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಜಯಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!