ಜನಮನ

ಮದುವೆಯಾದ ಎರಡೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ ವಧು:ಮಗುವಿನ ನಿಜವಾದ ತಂದೆ ಯಾರು? ಪಟ್ಟು ಹಿಡಿದ ವರನ ಸಹೋದರಿ!

Views: 327

ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಎರಡೇ ದಿನಕ್ಕೆ ನವ ವಧು ಮಗುವಿಗೆ ತಾಯಿಯಾಗಿದ್ದಾಳೆ. ಮೊದಲ ರಾತ್ರಿಯನ್ನು ಕಳೆದ ಮಧು ಮಗ ಕಕ್ಕಾಬಿಕ್ಕಿಯಾದ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಮದುಮಗನ ಸಹೋದರಿ ಈ ಮದುವೆಯ ಇಂಚಿಂಚು ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ನವವಧು ಕೊಟ್ಟ ಶಾಕ್‌ಗೆ ಇಡೀ ಮನೆಯವರ ಮಾನ ಮರ್ಯಾದೆ ಮೂರಾಬಟ್ಟೆಯಾಗಿದೆ.

ಕಳೆದ ಫೆಬ್ರವರಿ 24ರಂದು ಈ ಮದುವೆ ನಡೆದಿದೆ. ಫೆಬ್ರವರಿ 25ರಂದು ಗಂಡು-ಹೆಂಡಿಗೆ ಮೊದಲ ರಾತ್ರಿಯ ಶಾಸ್ತ್ರ ನೆರವೇರಿಸಲಾಗಿದೆ. ಫೆಬ್ರವರಿ 26ರಂದು ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದ ನವವಧು ಸೀದಾ ಹೆರಿಗೆ ವಾರ್ಡ್‌ಗೆ ದಾಖಲಾಗಿದ್ದಾಳೆ. ಮದುವೆಯಾದ 2 ದಿನಕ್ಕೆ ಒಂದು ಮಗುವಿಗೂ ಜನ್ಮ ನೀಡಿದ್ದಾಳೆ.

ಮದುವೆಯಾದ ಎರಡೇ ದಿನಕ್ಕೆ ಹುಡುಗಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋದ ಮನೆಯವರಿಗೆ ಬಿಗ್ ಶಾಕ್ ಎದುರಾಗಿದೆ. ಮದುವೆಯಲ್ಲಿ ಹೆಣ್ಣು ಲೆಹೆಂಗಾ ಧರಿಸಿದ್ದು, ಹೊಟ್ಟೆಯನ್ನು ಕಾಣದಂತೆ ಮರೆ ಮಾಚಿದ್ದಳು. ಬೇಕು ಅಂತಲೇ ಹುಡುಗಿ ಲೆಹೆಂಗಾ ಧರಿಸಿದ್ದು ನಮಗೆ ಸ್ವಲ್ಪವೂ ಅನುಮಾನವೇ ಬರಲಿಲ್ಲ ಎಂದಿದ್ದಾರೆ.

ಮದುಮಗನ ಸಹೋದರಿ, ಹುಡುಗಿ ಕಡೆಯವರು ನಮಗೆ ಮೋಸ ಮಾಡಿದ್ದಾರೆ. ಮೊದಲ ರಾತ್ರಿಯಲ್ಲೂ ಹುಡುಗಿನ ನನ್ನ ಸಹೋದರನಿಂದ ಅಂತರ ಕಾಯ್ದು ಕೊಂಡಿದ್ದಳು. ಮಾತನಾಡಲು ನಿರಾಕರಿಸಿದ್ದರಿಂದ ಹುಡುಗ ಬೇರೆ ಜಾಗದಲ್ಲಿ ಮಲಗಿದ್ದ. ಆದರೆ ಮರುದಿನವೇ ಮಗುವಿನ ಜನ್ಮ ನೀಡಿದ್ದಾಳೆ. ಹುಡುಗ-ಹುಡುಗಿ ಮಧ್ಯೆ ಮೊದಲಿಂದಲೂ ಯಾವುದೇ ಪರಿಚಯವಿರಲಿಲ್ಲ. ಹೀಗಾಗಿ ಆ ಮಗುವಿನ ನಿಜವಾದ ತಂದೆ ಯಾರು ಅಂತ ಅವರು ಬಹಿರಂಗ ಪಡಿಸಬೇಕು ಅಂತ ಪಟ್ಟು ಹಿಡಿದಿದ್ದಾರೆ.

Related Articles

Back to top button