ಜನಮನ
ಕುಂದಾಪುರ:ಸರಕಾರಿ ಅಧಿಕಾರಿಗಳ ನಕಲಿ ಸಹಿ, ಸೀಲು ಬಳಸಿ ವಂಚನೆ: ಅರ್ಜಿ ಕೇಂದ್ರಕ್ಕೆ ದಾಳಿ

Views: 294
ಕನ್ನಡ ಕರಾವಳಿ ಸುದ್ದಿ:ಸರಕಾರಿ ಅಧಿಕಾರಿಗಳ ನಕಲಿ ಸಹಿ ಹಾಗೂ ಸೀಲು ಬಳಸಿ ವಂಚಿಸುತ್ತಿರುವ ಅರ್ಜಿ ಕೇಂದ್ರಕ್ಕೆ ಪೊಲೀಸರು ದಾಳಿ ಮಾಡಿದ್ದಾರೆ.
ಕುಂದಾಪುರದ ಫೆರಿ ರಸ್ತೆಯಲ್ಲಿ ಅರ್ಜಿ ಕೇಂದ್ರ ನಡೆಸುತ್ತಿರುವ ಕೋಡಿ ನಾಗೇಶ್ ಎಂಬುವರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿಯಾಗಿ ತಯಾರಿಸುವ ದಸ್ತಾವೇಜಿಗೆ ಸ್ಟ್ಯಾಂಪ್ ಹಾಕಿ, ಸರಕಾರಿ ಅಧಿಕಾರಿಗಳ ನಕಲಿ ಸಹಿ ಹಾಗೂ ಸೀಲು ಬಳಸಿ ವಂಚಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಎಸ್‌ಐ ನಂಜಾ ನಾಯ್ಕ ಹಾಗೂ ಸಿಬಂದಿ ನ್ಯಾಯಾಲಯದ ಅನುಮತಿ ಪಡೆದು ಅರ್ಜಿ ಕೇಂದ್ರಕ್ಕೆ ದಾಳಿ ನಡೆಸಿದ್ದಾರೆ.ಈ ವೇಳೆ ವಿವಿಧ ಇಲಾಖೆಗಳ, ಶಾಲೆಗಳ, ಅಧಿಕಾರಿಗಳ ಸೀಲುಗಳು ಹಾಗೂ ದಿನ, ತಿಂಗಳು, ವರ್ಷ ಇರುವ ರಬ್ಬರ್ ಸ್ಟ್ಯಾಂಪ್ ಪತ್ತೆಯಾಗಿದೆ.ಕುಂದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡು,ಪ್ರಕರಣ ದಾಖಲಿಸಿಕೊಂಡಿದ್ದಾರೆ.