8 ತಿಂಗಳ ಗರ್ಭಿಣಿಯ ಶೀಲ ಶಂಕಿಸಿ 8 ವರ್ಷದ ಮಗನ ಕಣ್ಣೆದುರೇ ಕೊಲೆ ಮಾಡಿದ ಪತಿ

Views: 127
ಕನ್ನಡ ಕರಾವಳಿ ಸುದ್ದಿ: ಶೀಲಶಂಕಿಸಿ 8 ತಿಂಗಳ ಗರ್ಭಿಣಿಯನ್ನು 8 ವರ್ಷದ ಮಗನ ಕಣ್ಣೆದುರೇ ನೇಣು ಬಿಗಿದು ಕೊಲೆ ಮಾಡಿ ಬಳಿಕ ಪತಿ ಠಾಣೆಗೆ ಹೋಗಿ ಶರಣಾಗಿರುವ ಘಟನೆ ನಗರದ ತಿಲಕ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗ್ಮಾ ಕೊಲೆಯಾದ ಗರ್ಭಿಣಿ. ಪತಿ ಸೈಯದ್ ಆರೋಪಿ ಎಂದು ತಿಳಿದುಬಂದಿದೆ. ಹೌಸಿಂಗ್ ಬೋರ್ಡ್ ನಿವಾಸಿಯಾದ ನಗ್ಮಾಗೆ 8 ವರ್ಷದ ಮಗನಿದ್ದಾನೆ. ಒಂದು ವರ್ಷದ ಹಿಂದೆ ನಗ್ಮಾ ಮೊದಲ ಗಂಡನನ್ನು ಬಿಟ್ಟಿದ್ದಳು. ಬಳಿಕ ಸೈಯದ್‌ನನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದಳು. ಆದರೆ, ಶೀಲಶಂಕಿಸಿ ಎಂಟು ತಿಂಗಳ ಗರ್ಭಿಣಿ ನಗ್ಮಾಳನ್ನು ನೇಣು ಬಿಗಿದು ಗಂಡ ಹತ್ಯೆ ಮಾಡಿದ್ದಾನೆ.
ಆರೋಪಿ ನಶೆಮುಕ್ತ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಹಣ ತೆಗೆದುಕೊಂಡು ಬಾ ಎಂದು ಪೀಡಿಸಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಗಲಾಟೆ ನಡೆದು 8 ವರ್ಷದ ಮಗನ ಕಣ್ಣೆದುರೇ ನಗ್ಮಾ ಬಾಯಿಗೆ ಬಟ್ಟೆ ತುರುಕಿ ನೇಣು ಬಿಗಿದು ಕೊಲೆ ಮಾಡಿದ ಗಂಡ, ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ