ಸಾಂಸ್ಕೃತಿಕ

ಅಕ್ರಮ ಚಿನ್ನ ಸಾಗಣಿಕೆ ಪ್ರಕರಣದಲ್ಲಿ ಮಾಣಿಕ್ಯ ನಟಿ ರನ್ಯಾ ರಾವ್ ಅರೆಸ್ಟ್

Views: 105

ಕನ್ನಡ ಕರಾವಳಿ ಸುದ್ದಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿನಿಮಾ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ.

ಕನ್ನಡ ಸಿನಿಮಾ ನಟಿ ರನ್ಯಾ ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ಆಕೆಯನ್ನು ಏರ್ಪೋಟ್ ಕಸ್ಟಮ್ಸ್ ಡಿಆರ್‌ಐ ತಂಡದ ಅಧಿಕಾರಿಗಳಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಅಧಿಕಾರಿಗಳು ರನ್ಯಾ ರನ್ನು ವಶಕ್ಕೆ ಪಡೆದಿದ್ದಾರೆ. ಬೇರೆ ದೇಶದಿಂದ ದೆಹಲಿ ಮೂಲಕ ಚಿನ್ನ ಸಾಗಾಣಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಐಪಿಎಸ್ ಅಧಿಕಾರಿಯ ಹತ್ತಿರದ ಸಂಬಂಧಿಯಾಗಿರುವ ರನ್ಯಾರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ನಡದ ‘ಮಾಣಿಕ್ಯ’ ‘ಪಟಾಕಿ’ ಹಾಗೂ ತಮಿಳಿನ ‘ವಾಘಾ’ ಸಿನಿಮಾಗಳಲ್ಲಿ ರನ್ಯಾ ರಾವ್ ನಟಿಸಿದ್ದರು. ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ದುಬೈನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ನಿಗದಿತ ಪ್ರಮಾಣ ಚಿನ್ನವನ್ನು ಮಾತ್ರ ತೆಗೆದುಕೊಂಡು ಬರಲು ಅನುಮತಿ ಇದೆ. ಸದ್ಯ ನಿಯಮಗಳ ಪ್ರಕಾರ, ಪುರುಷರಿಗೆ 20 ಗ್ರಾಂ, ಮಹಿಳೆಯರಿಗೆ 40 ಗ್ರಾಂ ಚಿನ್ನವನ್ನು (ಗರಿಷ್ಠ 1 ಲಕ್ಷ ರೂ. ಮೌಲ್ಯದ) ತರಬಹುದು. ನಟಿ ರನ್ಯಾ ರಾವ್‌ ಅವರು 15 ಕೆಜಿಯಷ್ಟು ಚಿನ್ನ ತಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಸದ್ಯ ವಿಚಾರಣೆ ಬಳಕವಷ್ಟೇ ಸತ್ಯಾಸತ್ಯತೆ ತಿಳಿಯಬೇಕಿದೆ.

Related Articles

Back to top button