ಶಿರಸಿ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆ

Views: 107
ಕನ್ನಡ ಕರಾವಳಿ ಸುದ್ದಿ: ಶಿರಸಿ ಸಿದ್ದಾಪುರ ತಾಲೂಕಿನ ವಾಟೆಹೊಳೆ ಜಲಪಾತದಲ್ಲಿ ಮುಳುಗಿದ ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ.
ಶಿರಸಿಯ ಮರಾಠಿಕೊಪ್ಪದ ಅಕ್ಷಯ ಭಟ್ ಮತ್ತು ಸುಹಾಸ್ ಶೆಟ್ಟಿ ಎನ್ನುವವರು ನಾಪತ್ತೆಯಾದವರು 22 ವರ್ಷದ ಈ ಯುವಕರು ಇತರ ನಾಲ್ವರೊಂದಿಗೆ 3 ಬೈಕ್ ನಲ್ಲಿ ತಲಾ ಇಬ್ಬರಂತೆ ಶುಕ್ರವಾರ ವಾಟೆಹೊಳೆ ಜಲಪಾತಕ್ಕೆ ತೆರಳಿದ್ದರು.ಸಂಜೆ 5 ಗಂಟೆ ಹೊತ್ತಿಗೆ ಈ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ.
ಶಿರಸಿ ನೀಲ್ಕುಂದ ಗ್ರಾಮದ ವಾಟೆಹೊಳೆ ಫಾಲ್ಸ್ ನೋಡಲು ಬಂದ ಆರು ಜನ ಪ್ರವಾಸಿಗರಲ್ಲಿ ಎರಡು ಮಂದಿ ಅಂದಾಜು ಸಂಜೆ 5 ಗಂಟೆ ಸುಮಾರಿಗೆ ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ. ಕಾಣೆಯಾದವರಲ್ಲಿ ಅಕ್ಷಯ್ ಪರಮೇಶ್ವರ ಭಟ್ ಅಂದಾಜು ವಯಸ್ಸು 22 ಸಾಕಿನ್ ಶಿರಸಿ, ಸುಹಾಸ ಶೆಟ್ಟಿ ಸಾಕಿನ ಮರಾಠಿ ಕೊಪ್ಪ ಅಂದಾಜು ವಯಸ್ಸು 22 ಎಂದು ತಿಳಿದುಬಂದಿದೆ.
ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತಿಯ ನೀಲ್ಕುಂದ ಗ್ರಾಮದ ವಾಟೆಹೊಳೆ ಫಾಲ್ಸ್ ನಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ಈರ್ವರು ಶವವಾಗಿ ಪತ್ತೆಯಾಗಿದ್ದಾರೆ.ಶಿರಸಿ ತಾಲೂಕಿನ ಅಕ್ಷಯ್ ಪರಮೇಶ್ವರ ಭಟ್ (22) ಹಾಗು ಮರಾಠಿಕೊಪ್ಪದ ಜೋಡಕಟ್ಟೆ ನಿವಾಸಿಯಾಗಿದ್ದ ಸುಹಾಸ ಶೆಟ್ಟಿ (22) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ.