ಸಾಂಸ್ಕೃತಿಕ

ಒಂದೇ ಒಂದು ಚುಂಬನಕ್ಕೆ 37 ರೀಟೇಕ್ ತೆಗೆದುಕೊಂಡ ನಟ.. ಆ್ಯಕ್ಷನ್ ಕಟ್ ಹೇಳಿ ಸುಸ್ತಾದ ನಿರ್ದೇಶಕ!

Views: 317

ಕನ್ನಡ ಕರಾವಳಿ ಸುದ್ದಿ: ಚುಂಬನ ದೃಶ್ಯ ವಿಚಾರವಾಗಿ 2014ರಲ್ಲಿ ಬಂದ ಒಂದು ಸಿನಿಮಾ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಆ ಸಿನಿಮಾದ ನಾಯಕ ಒಂದು ಚುಂಬನದ ದೃಶ್ಯಕ್ಕಾಗಿ ಸುಮಾರು 37 ರೀಟೇಕ್ ತೆಗೆದುಕೊಂಡಿದ್ದರು. ಇದರಿಂದ ಬೇಸತ್ತ ಡೈರೆಕ್ಟರ್ ಹೀರೋನನ್ನು ಬೈದರೆ ಹೀರೋ ಹೀರೋಯಿನ್ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಹೇಳಿದ್ದ.

ನಾವು ಈಗ ಮಾತನಾಡುತ್ತಿರುವುದು 18 ಸಿನಿಮಾಗಳಲ್ಲಿ ನಟಿಸಿ ಅವುಗಳಲ್ಲಿ 8 ಸಿನಿಮಾ ಹಿಟ್ ಕೊಟ್ಟು 3 ಸಿನಿಮಾಗಳನ್ನು ರೆಕಾರ್ಡ್ ಬ್ರೇಕ್ ಮಾಡಿದ ಚಾಕಲೇಟ್ ಬಾಯ್ ಆಫ್ ಬಾಲಿವುಡ್ ಸಿನಿಮಾ ಎಂದೇ ಕರೆಸಿಕೊಳ್ಳುವ ಕಾರ್ತಿಕ್ ಆರ್ಯನ್ ಬಗ್ಗೆ. 2014ರಲ್ಲಿ ಇಂತಹದೊಂದು ಘಟನೆ ಕಾಂಚಿ ಸಿನಿಮಾ ಶೂಟಿಂಗ್ ವೇಳೆ ನಡೆದಿತ್ತು ಕಾರ್ತಿಕ್ ಆರ್ಯನ್ ಜೊತೆ ಮಿಶ್ತಿ ಚಕ್ರವರ್ತಿ ನಟನೆ ಮಾಡುತ್ತಿದ್ದರು.

ಈ ಸಿನಿಮಾಗೆ ಸುಭಾಷ್ ಘೈ ನಿರ್ದದೇಶನವಿತ್ತು. ಈ ಸಿನಿಮಾದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ ಕಾರ್ತಿಕ್ ಆರ್ಯನ್ ಕಾಣಿಸಿಕೊಂಡಿದ್ದರು. ಆದ್ರೆ ಒಂದೇ ಒಂದು ಚುಂಬನ ದೃಶ್ಯಕ್ಕಾಗಿ ಕಾರ್ತಿಕ್ ಆರ್ಯನ್ ಸುಮಾರು 37 ರೀಟೇಕ್ ತೆಗೆದುಕೊಂಡಿದ್ದರ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದದ್ದಾರೆ. ನಾವು ಅಕ್ಷರಶಃ ಪ್ರೇಮಿಗಳಂತೆ ನಟಿಸಿದ್ದೇವು ಆದ್ರೆ ಕಿಸ್ಸಿಂಗ್ ಸೀನ್ ಇಷ್ಟೊಂದು ತಲೆನೋವು ತಂದಿಡುತ್ತೆ ಅಂತ ಗೊತ್ತಿರಲಿಲ್ಲ. ನಾವು ಒಟ್ಟು 37 ರೀಟೇಕ್ ತೆಗೆದುಕೊಂಡಿದ್ದೇವು. ಕೊನೆಗೆ ನಿರ್ದೇಶಕ ಸುಭಾಷ್ ಅವರು ಓಕೆ ಹೇಳಿದಾಗ ನಮಗೆ ನಿರಾಳವೆನಿಸಿತ್ತು ಎಂದು ಹೇಳಿಕೊಂಡಿದ್ದಾರೆ.

ಈ ಅನುಭವದ ಬಗ್ಗೆ ಜೋಕ್ ಮಾಡಿರುವ ಕಾರ್ತಿಕ್ ಆಗ ನನಗೆ ಮಿಸ್ತಿ ಬೇಕಂತಲೇ ಹೀಗೆ ಮಾಡುತ್ತಿದ್ದಾಳೆ ಎನಿಸಿತ್ತು ಸುಭಾಷ್ ಘೈಗೆ ಆ ಒಂದು ಸೀನ್ನಲ್ಲಿ ತುಂಬಾ ಪ್ಯಾಷನೆಟ್ ಕಿಸ್ ಇರುವಂತ ದೃಶ್ಯವನ್ನು ಸೆರೆಹಿಡಿಯುವುದಿತ್ತು. ನಿಜವಾಗಿಯೂ ನನಗೆ ಹೇಗೆ ಮಾಡಬೇಕು ಎಂದು ಗೊತ್ತಿರಿಲ್ಲ. ಕೊನೆಗೆ ಮಿಸ್ತಿಯೇ ಬಂದು ಯಾಕೆ ನೀವೇ ನನಗೆ ಹೇಗೆ ಕಿಸ್ ಕೊಡಬೇಕು ಎಂದು ಕಲಿಸಬಾರದು ಎಂದು ಕೇಳಿದ್ದಳು ಎಂದಿದ್ದಾರೆ.

Related Articles

Back to top button
error: Content is protected !!