ಕರಾವಳಿ

ನಕಲಿ ಅಂಕಪಟ್ಟಿ ನೀಡಿ ಅಂಚೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಆರೋಪಿಗೆ ಜೈಲು ಶಿಕ್ಷೆ 

Views: 111

ಕನ್ನಡ ಕರಾವಳಿ ಸುದ್ದಿ: ನಕಲಿ ಅಂಕಪಟ್ಟಿಯನ್ನು ನೀಡಿ ಅಂಚೆ ಇಲಾಖೆಯಲ್ಲಿ ಕೆಲಸ ಪಡೆದು ಸರ್ಕಾರಕ್ಕೆ ವಂಚಿಸಿರುವ ಅಪರಾಧಕ್ಕಾಗಿ ವ್ಯಕ್ತಿಯೊಬ್ಬನಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.25ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಕಾರೆಕಾಡು ಗ್ರಾಮದ ಎಂ.ಬಿ.ಸಂದೇಶ (32)  ಶಿಕ್ಷೆಗೆ ಗುರಿಯಾದವನು.

ಅಂಚೆ ಇಲಾಖೆಯಲ್ಲಿ 2019ನೇ ಸಾಲಿನಲ್ಲಿ ನಡೆದ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆ ನೇಮಕಾತಿಯಲ್ಲಿ ಆನ್‌ಲೈನ್‌ ಮುಖಾಂತರ ಎಂ.ಬಿ.ಸಂದೇಶ ಎಂಬಾತ ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ನಕಲಿ ಅಂಕಪಟ್ಟಿಯನ್ನು ಇಟ್ಟಿರುವುದು ದಾಖಲೆ ಪರಿಶೀಲನೆ ವೇಳೆ ಕಂಡುಬಂದಿತ್ತು.

ನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ ಇಲಾಖೆಗೆ ಸಲ್ಲಿಸಿ ಅಂಚೆ ಇಲಾಖೆಯಲ್ಲಿ ನೌಕರಿ ಪಡೆದು ಸರ್ಕಾರಕ್ಕೆ ಮೋಸ ಮಾಡಿರುವ ಬಗ್ಗೆ ಆತನ ವಿರುದ್ಧ ಮಡಿಕೇರಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 465, 468, 471, 417, 420 2 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು 2022ರ ಫೆ.25ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ನಗರ ಠಾಣೆ ಪಿಎಸ್‌ಐ ಶ್ರೀನಿವಾಸ್, ತನಿಖಾ ಸಹಾಯಕಿಯಾದ ಹೆಚ್.ಸಿ.ದಿವ್ಯಾ ಅವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಆರೋಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣ ಪತ್ರದ ವಿಚಾರಣೆ ನಡೆಸಿದ ಮಡಿಕೇರಿಯ ಸಿನಿಯ‌ರ್ ಸಿವಿಲ್‌ ಜಡ್ಜ್ ಮತ್ತು ಸಿಜೆಎಂ. ನ್ಯಾಯಾಲಯದ ನ್ಯಾಯಾಧೀಶೆ ಎನ್‌.ಬಿ. ಜಯಲಕ್ಷ್ಮಿ ಅವರು ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರಿ ಅಭಿಯೋಜಕ ಬಿ.ಎಸ್. ಸಂತೋಷ್‌ ಅವರು ಸರಕಾರದ ಪರ ವಾದ ಮಂಡಿಸಿದರು.

Related Articles

Back to top button
error: Content is protected !!