ಕರಾವಳಿ

ಪಡುಬಿದ್ರಿ:ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಇಬ್ಬರು ಸಮುದ್ರ ಪಾಲು; ಒರ್ವನ ರಕ್ಷಣೆ

Views: 49

ಪಡುಬಿದ್ರಿ: ಮೀನುಗಾರಿಕೆಗೆ ಇಳಿದಿದ್ದ ಇಬ್ಬರು ಸಮುದ್ರ ಪಾಲಾಗಿರುವ ಘಟನೆ ಹೆಜಮಾಡಿ ಸಮುದ್ರ ತೀರದಲ್ಲಿ ಸೋಮವಾರ(ಡಿ.30) ಸಂಭವಿಸಿದೆ.

ಮೃತರನ್ನು ಅಮನ್(19) ಹಾಗೂ ಅಕ್ಷಯ್(19) ಎಂದು ಗುರುತಿಸಲಾಗಿದೆ.

ಅಮನ್, ಅಕ್ಷಯ್ ಹಾಗೂ ಪವನ್ ಮೂವರು ಸೇರಿ ಮೀನುಗಾರಿಗೆ ತೆರಳಿದ್ದರು ಈ ವೇಳೆ ಮೂವರು ಸಮುದ್ರ ಪಾಲಾಗಿದ್ದಾರೆ, ಇಂದು ಎಳ್ಳಮಾವಾಸ್ಯೆ ಆಗಿದ್ದ ಕಾರಣ ಸಮುದ್ರ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಮುದ್ರಪಾಲಾದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು ಓರ್ವನನ್ನು ರಕ್ಷಣೆ ಮಾಡಲಾಗಿದೆ.

ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button