ಕರಾವಳಿ

ಕುಂದಾಪುರ: ಆರಾಟೆ ಸೇತುವೆ ಬಳಿ ಲಾರಿಗೆ-ಲಾರಿ ಢಿಕ್ಕಿ:ಚಾಲಕ ಗಂಭೀರ

Views: 75

ಕುಂದಾಪುರ : ಆರಾಟೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಂದಾಪುರದಿಂದ  ಬೈಂದೂರಿಗೆ ಸಾಗುತ್ತಿದ್ದ ಎರಡು ಲಾರಿಗಳು ಕನ್ನಡ ಕುದ್ರು ಎಂಬಲ್ಲಿ ಡಿವೈಡರ್ ಬಳಿ ಹೆದ್ದಾರಿ ಮಧ್ಯಭಾಗದಲ್ಲಿ ಮುಂದಿನ ಲಾರಿಗೆ ಹಿಂದಿನ ಬಂದ ಲಾರಿ ಡಿಕ್ಕಿ ಹೊಡೆದು ಲಾರಿ ಚಾಲಕ ಗಂಭೀರ ಗಾಯಗೊಂಡು  ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ .

ಕಳೆದ ಎರಡು ತಿಂಗಳಿಂದ ದಿನನಿತ್ಯ ಅವೈಜ್ಞಾನಿಕ ಡಿವೈಡರ್, ಹಾಗೂ ರಾತ್ರಿಯ ವೇಳೆಯಲ್ಲಿ ದಾರಿದೀಪ ಇಲ್ಲದೆ ವಾಹನಗಳು ಸಾಲುಗಟ್ಟಿ ಅಪಘಾತ ಆಗುತ್ತಿದ್ದು . ವಾಹನ ಸವಾರರಿಗೆ ಕಂಟಕ ಎದುರಾಗಿದೆ, , ಹೆದ್ದಾರಿ ಪ್ರಾಧಿಕಾರ, ಹಾಗೂ ಜಿಲ್ಲಾಡಳಿತ ನಿರ್ಲಕ್ಷಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Related Articles

Back to top button