ಕೋಟದ ಪಂಚವರ್ಣದಿಂದ ಹುತಾತ್ಮ ಯೋಧ ಅನೂಪ್ ಪೂಜಾರಿಗೆ ಅಶ್ರುತರ್ಪಣೆ

Views: 101
ಕೋಟ: ದೇಶ ಕಾಯುವ ಕಾಯಕದಲ್ಲಿ ಹುತಾತ್ಮರಾಗುವ ಕ್ಷಣ ಮರೆಯಲಾಗದ ಪುಟಗಳಲ್ಲಿ ಸೇರಿಕೊಂಡಿದೆ ಎಂದು ಭಾರತೀಯ ದೂರಸಂಪರ್ಕ ವಿಭಾಗದ ನಿವೃತ್ತ ಡಿಜಿಎಂ ಮಣೂರು ವಿಷ್ಣುಮೂರ್ತಿ ಮಯ್ಯ ಅವರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಹಾಗೂ ಸ್ನೇಹಕೂಟ ಮಣೂರು ಇವರ ನೇತೃತ್ವದಲ್ಲಿ ಹುತಾತ್ಮಯೋಧ ಅನೂಪ್ ಪೂಜಾರಿಗೆ ಅಶ್ರುತರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ ದೇಶಾಭಿಮಾನ ಕಿಚ್ಚು ಪ್ರತಿಯೊಬ್ಬರಲ್ಲೂ ಇರುತ್ತದೆ ಆದರೆ ಸೈನ್ಯದ ಮೂಲಕ ಸೇವೆ ಸಲ್ಲಿಸುವ ಅದರಲ್ಲಿ ತ್ಯಾಗ ಬಲಿದಾನ ಶ್ರೇಷ್ಢತೆಯನ್ನು ಪಡೆಯುತ್ತದೆ ಅದೇ ರೀತಿ ಅನೂಪ್ ಪೂಜಾರಿ ದೇಶಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಭಾರತ ಮಾತೆಯ ಮಡಿಲು ಸೇರಿದ್ದಾರೆ ಇಂಥಹ ಅಶುತರ್ಪಣಾ ಅರ್ಥಪೂರ್ಣ ಎಂದರು.
ಇದೇ ವೇಳೆ ಮೌನಾಚರಣೆ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಭನಮನ ಅರ್ಪಿಸಲಾಯಿತು.
ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಸ್ನೇಹಕೋಟದ ಸಂಚಾಲಕಿ ಭಾರತಿ ವಿ ಮಯ್ಯ,ಸಾಂಸ್ಕೃತಿಕ ಚಿಂತಕಿ ರಶ್ಮಿರಾಜ್ ಕುಂದಾಪುರ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ನೂತನ ಅಧ್ಯಕ್ಷ ಮನೋಹರ್ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಮಣೂರು ಮಹಾಲಿಂಗೇಶ್ವರ ಸಭಾ ಭವನದ ಅಧ್ಯಕ್ಷ ರಾಜೇಂದ್ರ ಉರಾಳ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.ಕಾರ್ಯಕ್ರಮವನ್ನು ಪಂಚವರ್ಣದ ರವೀಂದ್ರ ಕೋಟ ನಿರ್ವಹಿಸಿದರು.