ಕರಾವಳಿ
ತ್ರಾಸಿ ಕಡಲ ಕಿನಾರೆಯಲ್ಲಿ ಸುಳಿವು ಸಿಗದ ನಾಪತ್ತೆಯಾದ ರೈಡರ್
Views: 0
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ತ್ರಾಸಿ ಕಡಲ ಕಿನಾರೆಯಲ್ಲಿ ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್‌ಸ್ಕೀ ಬೋಟ್ ಮಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಜೆಟ್ ಸ್ಕೀ ರೈಡರ್ ನಾಪತ್ತೆಯಾದ ಘಟನೆ ಶನಿವಾರ (ಡಿ.21) ಸಂಜೆ ಸಂಭವಿಸಿದೆ.
ಜೆಟ್ ಸ್ಕೀ ರೈಡರ್ ರವಿದಾಸ್ (45) ನಾಪತ್ತೆಯಾಗಿದ್ದು, ಮತ್ತೋರ್ವ ಬೆಂಗಳೂರಿನ ಪ್ರವಾಸಿಗನನ್ನು ರಕ್ಷಿಸಲಾಗಿದೆ.
ರವಿವಾರ ಇಡೀ ದಿನ ಹುಡುಕಾಟ ನಡೆಸಿದರೂ, ಯಾವುದೇ ಸುಳಿವು ಸಿಗಲಿಲ್ಲ.
ರವಿವಾರ ಬೆಳಗ್ಗೆಯಿಂದ ಗಂಗೊಳ್ಳಿಯ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಗಂಗೊಳ್ಳಿ ಪೊಲೀಸರ ನೇತೃತ್ವದಲ್ಲಿ ಬೋಟ್‌ಗಳ ಮೂಲಕ ಹುಡುಕಾಟ ಕಾರ್ಯಚರಣೆ ನಡೆಯಿತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ.