ಕರಾವಳಿ

ಕುಂದಾಪುರ ಕೋಡಿ ಬೀಚ್‌ಗೆ ಸ್ನಾನಕ್ಕೆಂದು ತೆರಳಿದ್ದ ಮೂವರಲ್ಲಿ ಇಬ್ಬರು ಸಮುದ್ರದ ಅಲೆಗೆ ಸಿಕ್ಕಿ ಸಾವು, ಓರ್ವ ರಕ್ಷಣೆ 

Views: 263

ಕುಂದಾಪುರ: ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಬೀಚ್‌ಗೆ ಸ್ನಾನಕ್ಕೆಂದು ತೆರಳಿದ್ದ ಮೂವರು ಸಹೋದರರ ಪೈಕಿ ಇಬ್ಬರು ನೀರುಪಾಲಾಗಿ, ಓರ್ವನನ್ನು ರಕ್ಷಣೆ ಮಾಡಿರುವ ಘಟನೆ ಶನಿವಾರ ಸಂಜೆ ಡಿ.7 ರಂದು ನಡೆದಿದೆ.

ಅಂಪಾರು ಗ್ರಾಮದ ಮೂಡುಬಗೆಯ ದಾಮೋದರ ಪ್ರಭು ಹಾಗೂ ಚಿತ್ರಾಕಲಾ ಪ್ರಭು ದಂಪತಿಯ ಪುತ್ರರಾದ ದರ್ಶನ್‌ (18) ಧನರಾಜ್‌ (23) ಹಾಗೂ ಧನುಷ್‌ ನೀರಿಗಿಳಿದಾಗ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ದರ್ಶನ್, ಧನರಾಜ್‌ ನೀರುಪಾಲಾಗಿದ್ದು, ಧನುಷ್‌ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು,ಧನುಷ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಇವರು ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಸಂದರ್ಭ ಕಡಲ ಅಲೆಗೆ ಈ ಮೂವರು ಸಹೋದರರು ಕೊಚ್ಚಿಕೊಂಡು ಹೋಗಿದ್ದು ತಕ್ಷಣ ಸ್ಥಳೀಯರು ಓರ್ವನನ್ನು ರಕ್ಷಿಸಿದ್ದಾರೆ.ಆದರೆ ಇಬ್ಬರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿರುತ್ತಾರೆ.

ಇಬ್ಬರ ಮೃತದೇಹ ಸ್ಥಳದಲ್ಲೇ ಪತ್ತೆಯಾಗಿದೆ ಎಂದು ತಿಳಿಯಲಾಗಿದೆ.

ಕುಂದಾಪುರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಇಬ್ಬರ ಮೃತದೇಹ ಕುಂದಾಪುರ ಶವಗಾರಕ್ಕೆ ಸಾಗಿಸಿರುತ್ತಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button