ಸಾಂಸ್ಕೃತಿಕ

ಕಾಂತಾರ-1 ಬಿಡುಗಡೆ ದಿನಾಂಕ ಘೋಷಣೆ

Views: 202

ಕನ್ನಡ ಕರಾವಳಿ ಸುದ್ದಿ: ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಕಾಂತಾರ ಒಂದು ದಂತಕಥೆ ಚಿತ್ರದ ಚಾಪ್ಟರ್-1 ಬಿಡುಗಡೆಗೆ ದಿನಾಂಕ ಘೋಷಣೆಯಾಗಿದೆ.

ರಿಷಬ್‌ ಶೆಟ್ಟಿ ರಚಿಸಿ, ನಿರ್ದೇಶಿಸಿ, ನಟಿಸಿರುವ ‘ಕಾಂತಾರ ಒಂದು ದಂತಕಥೆ ಅಧ್ಯಾಯ–1’ 2025ರ ಅಕ್ಟೋಬರ್‌ 2 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

7 ಭಾಷೆಗಳ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಹೊಂಬಾಳೆ ಫಿಲ್ಮ್ಸ್‌ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಕದಂಬರ ಕಾಲದ ಕಥೆಯನ್ನು ಹೊತ್ತ ಚಿತ್ರ ಇದಾಗಿರಲಿದೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ರಿಷಬ್‌ ಶೆಟ್ಟಿ ಕಳರಿಪಯಟ್ಟು ತರಬೇತಿ ಪಡೆದ ಬಗ್ಗೆ ಫೋಟೊವನ್ನು ಹಂಚಿಕೊಂಡಿದ್ದರು.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ… ಒಟ್ಟು 7 ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಇದಾಗಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ಕಾತುರರಾಗಿದ್ದಾರೆ.

Related Articles

Back to top button