ಶ್ರೀ ಶಾರದಾ ಆಂಗ್ಲ ಮಾಧ್ಯಮ ಸಂಸ್ಥೆಯ ರಾಷ್ಟ್ರಮಟ್ಟದ ಕರಾಟೆಗೆ ಆಯ್ಕೆಯಾದ ವಿದ್ಯಾರ್ಥಿ ಗಳಿಂದ “ಬೃಹತ್ ರೋಡ್ ಶೋ”

Views: 137
ಕನ್ನಡ ಕರಾವಳಿ ಸುದ್ದಿ: ನವೆಂಬರ್ 26ರಂದು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ಸುವರ್ಣ ಪದಕದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಸ್ರೂರು 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಮೋಸಂ ಹಾಗೂ ತೃತೀಯ ಸ್ಥಾನವನ್ನು ಗಳಿಸಿ ಕಂಚಿನ ಪದಕವನ್ನು ಪಡೆದ ಇನ್ನೊರ್ವ ಪ್ರತಿಭಾನ್ವಿತ ವಿದ್ಯಾರ್ಥಿ ಪೃಥ್ವಿರಾಜ್ ಇವರ ಸಾಧನೆ “ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಹಾಗೂ ಈ ಸಂತೋಷದ ವಿಷಯವನ್ನು ಊರವರೊಂದಿಗೆ ಹಂಚಿಕೊಳ್ಳುವ ಸಲುವಾಗಿ” ಬೃಹತ್ ರೋಡ್ ಶೋ “ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆವರಣದಿಂದ ಆರಂಭವಾದ ರೋಡ್ ಶೋ ಬಸ್ರೂರು ಮಹಾಲಿಂಗೇಶ್ವರ ದೇವರ ದಿವ್ಯ ಸಾನಿಧ್ಯವಿರುವ ರಸ್ತೆಯವರೆಗೆ ಸಂಚರಿಸಿ ಮರಳಿ ಶಾಲೆಯ ಆವರಣದತ್ತ ಬಂದಿತು. ಕ್ರೀಡಾ ವಿಜೇತರ ರೋಡ್ ಶೋ ತೆರೆದ ಕಾರಿನ ಪುರ ಮೆರವಣಿಗೆಯ ಮೂಲಕ ನಡೆಯಿತು.
ಸಂಸ್ಥೆಯ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ, ಶೈಕ್ಷಣಿಕ ನಿರ್ದೇಶಕರಾದ ಶ್ರೀಯುತ ಪ್ರಕಾಶ್ ಶೆಟ್ಟಿ, ಪ್ರಾಂಶುಪಾಲರಾದ ಮಮತಾ ಪೂಜಾರಿ,ಆಡಳಿತ ಅಧಿಕಾರಿಯಾದ ಆಶಾ ಶೆಟ್ಟಿ, ಕರಾಟೆ ತರಬೇತುದಾರರಾದ ಸಂದೀಪ್ ಮತ್ತು ತಂಡ ಶಿಕ್ಷಕ ವರ್ಗದವರು ಹಾಗೂ ಏಳರಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







