ಕರಾವಳಿ
ಹೆಬ್ರಿ ಚೆಕ್ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಸಾವು
Views: 116
ಕನ್ನಡ ಕರಾವಳಿ ಸುದ್ದಿ:ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮೋಲ ಎಂಬಲ್ಲಿ ಚೆಕ್ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಹಾಗೂ ಬಾಲಕ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಜಯಂತ್ (19) ಮತ್ತು ಶ್ರೀಶಾ (13) ಮೃತಪಟ್ಟವರು.
ಇವರಿಬ್ಬರು ತಮ್ಮ ಮನೆಯ ಸಮೀಪವಿರುವ ಅಣೆಕಟ್ಟಿನ ಹಿನ್ನೀರಿನಲ್ಲಿ ಈಜಲು ಹೋಗಿದ್ದ ನಾಲ್ವರಲ್ಲಿ ಜಯಂತ್ ಮತ್ತು ಶ್ರೀಶ ಪ್ರವಾಹಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶಂಕರನಾರಾಯಣ ಪೊಲೀಸರು ಸ್ಥಳೀಯ ಈಜುಗಾರರ ಸಹಾಯ ಪಡೆದು ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಗೋಳಿಯಂಗಡಿ ಶ್ರೀ ದುರ್ಗಾ ಜುವೆಲರ್ಸ್ ಮಾಲಕ ಬೆಳ್ವೆ ನಿವಾಸಿ ಶ್ರೀಧರ್ ಆಚಾರ್ಯ ಮತ್ತು ಶ್ರೀಮತಿ ದಂಪತಿಯ ಪುತ್ರ ಹೆಬ್ರಿ ಎಸ್ ಆರ್ ಎಸ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಶ್ರೀಶಾ ಬೆಳ್ವೆ ಗ್ರಾಮದ ಸೂರ್ಗೋಳಿಯ ಕೂಲಿಕಾರ್ಮಿಕ ರಾಮನಾಯಕ್ ಮತ್ತು ಕಾವೇರಿ ದಂಪತಿಯ ಪುತ್ರ ಯಕ್ಷಗಾನ ಕಲಾವಿದ ಜಯಂತ ಮೃತಪಟ್ಟವರು.