ಕರಾವಳಿ

ಕುಂದಾಪುರ: ಕೋಟ ಮಣೂರಿನಲ್ಲಿ ಹೆಜ್ಜೇನು ದಾಳಿ,ಐವರು ಗಂಭೀರ ಗಾಯ

Views: 103

ಕುಂದಾಪುರ: ಹೆಜ್ಜೇನು ದಾಳಿಯಿಂದ ಐವರು ಗಂಭೀರ ಗಾಯಗೊಂಡ ಘಟನೆ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣೂರಿನಲ್ಲಿ ಸಂಭವಿಸಿದೆ

ಹೆಜ್ಜೇನು ದಾಳಿಗೊಳಗಾದವರನ್ನು ಕಲ್ಲು ಕೆಲಸದ ಮೇಸ್ತ್ರಿ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಕಾರ್ಮಿಕರಾದ ಮೊಹಮ್ಮದ್ ಪಾರಂಪಳ್ಳಿ, ಪ್ರಭಾಕರ, ಶೇಖರ್ ಪೂಜಾರಿ ಎಂದು ಗುರುತಿಸಲಾಗಿದೆ

ಕೋಟ ಮಣೂರಿನಲ್ಲಿ ಕಾಂಪೌಂಡ್ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನು ಏಕಾಏಕಿ ದಾಳಿ ನಡೆಸಿದೆ. ಈ ಜೇನು ನೊಣಗಳ ಕಡಿತದಿಂದ ತಪ್ಪಿಸಿಕೊಂಡು ಐವರು ರಸ್ತೆಗೆ ಓಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡವರನ್ನು ತಕ್ಷಣ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button