ಕರಾವಳಿ

ಚಂದ್ರಶೇಖರ್ ವಿ.ಎಸ್ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ 

Views: 168

ಕನ್ನಡ ಕರಾವಳಿ ಸುದ್ದಿ: ಚಂದ್ರಶೇಖರ್ ವಿ. ಎಸ್ ರವರಿಗೆ ಅಮೆರಿಕದ ಪ್ರತಿಷ್ಠಿತ ವಾಷಿಂಗ್ಟನ್ ಡಿಜಿಟಲ್ ಯೂನಿವರ್ಸಿಟಿಯಿಂದ ಬ್ಯಾಂಕಿಂಗ್ ಮೆನೇಜ್ ಮೆಂಟ್ ನಲ್ಲಿ ಗೌರವ ಡಾಕ್ಟರೇಟ್ ದೊರಕಿದೆ.

ನವೆಂಬರ್ 23ರಂದು ಗೋವಾದ ಮಡಗಾಂವ್‌ನಲ್ಲಿ ನಡೆದ ಸಮಾರಂಭದಲ್ಲಿ  ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು. 

ಚಂದ್ರಶೇಖರ್ ವಿ.ಎಸ್ ರವರು ಮದ್ರಾಸ್ ಯುನಿವರ್ಸಿಟಿಯಲ್ಲಿ ಎಂಕಾಂ ಪದವಿ ಪಡೆದಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಪ್ರಬಂಧಕರಾಗಿ 40 ವರ್ಷಗಳ ಯಶಸ್ವಿ ಸೇವೆಯಿಂದ ನಿವೃತ್ತರಾಗಿರುತ್ತಾರೆ. 

ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಆಂತರಿಕ ಲೆಕ್ಕ ಪರಿಶೋಧಕರು ಹಾಗೂ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹ ಮೊಕ್ತೇಸರರಾಗಿರುತ್ತಾರೆ.

ಇವರು ಕುಂದಾಪುರ ತಾಲೂಕಿನ ವಕ್ವಾಡಿ ದಿ.ಶೀನ ಶೆಟ್ಟಿಗಾರ್ ಮತ್ತು ದಿ.ಶ್ರೀಮತಿ ದುರ್ಗಿಯವರ ಸುಪುತ್ರರಾಗಿದ್ದು, ಪ್ರಸ್ತುತ ಉಡುಪಿ ಕಲ್ಯಾಣಪುರ ಸಂತೆಕಟ್ಟೆ ಶ್ರೀನಗರದ ನಿವಾಸಿಯಾಗಿರುತ್ತಾರೆ.

Related Articles

Back to top button
error: Content is protected !!