ಇತರೆ

ಬ್ರಹ್ಮಾವರ ಹೇರೂರಿನಲ್ಲಿ ತಾಯಿಯನ್ನು ನೋಡಿಕೊಳ್ಳಲು ನೇಮಿಸಿದ್ದ ಕೆಲಸದಾಕೆಯಿಂದ ಚಿನ್ನಾಭರಣ ಕಳವು

Views: 72

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಹೇರೂರಿನಲ್ಲಿ ತಾಯಿಯನ್ನು ನೋಡಿಕೊಳ್ಳಲು ನೇಮಿಸಿದ್ದ ಕೆಲಸದಾಕೆ ಮಹಿಳೆ ಚಿನ್ನಾಭರಣ ಕಳವು ಮಾಡಿರುವುದಾಗಿ ಪುತ್ರಿ ಆಶಾ ಎಸ್. ಪೂಜಾರಿ ಆರೋಪಿಸಿದ್ದಾರೆ.

ತಾಯಿಯ ಮೊಣಗಂಟಿಗೆ ಪ್ರ್ಯಾಕ್ಚರ್‌ ಆಗಿರುವುದರಿಂದ ಅವರನ್ನು ನೋಡಿಕೊಳ್ಳಲು 2026 ನೇ ಮಾರ್ಚ್‌ ತಿಂಗಳ ಆರಂಭದಿಂದ ಆರೂರಿನ ಲತಾ ಎಂಬವರನ್ನು ನೇಮಿಸಿರುವುದಾಗಿದೆ.

ಕಪಾಟಿನಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರ ಕಾಣೆಯಾಗಿತ್ತು. ಮನೆ ಕೆಲಸದಾಕೆ ಲತಾಳನ್ನು ವಿಚಾರಿಸಿದಾಗ ತಾನು ಚಿನ್ನವನ್ನು ತೆಗೆದು ಮುತ್ತೂಟ್‌ ಪೈನಾನ್ಸ್‌ನಲ್ಲಿ ಅಡವಿಟ್ಟಿರುವುದಾಗಿ ತಿಳಿಸಿ ಬಿಡಿಸಿ ಕೊಡುವುದಾಗಿ ಹೇಳಿದ್ದರು. ಆದರೆ ಚಿನ್ನ ಬಿಡಿಸಿ ಕೊಡದೆ, ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಕಳುವಾದ ಚಿನ್ನದ ಮೌಲ್ಯ 3,50,000/- ರೂಪಾಯಿ ಆಗಿರುತ್ತದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!