ಕರಾವಳಿ
ಅಡಿಕೆ ಮರದಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವು

Views: 167
ಕನ್ನಡ ಕರಾವಳಿ ಸುದ್ದಿ : ಅಡಕೆ ಕೀಳಲೆಂದು ಮರ ಹತ್ತಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಪಾಣೆಮಂಗಳೂರಿಗೆ ಸಮೀಪದ ಬೋಳಂಗಡಿ ಎಂಬಲ್ಲಿ ಸಂಭವಿಸಿದೆ.
ಬೋಳಂಗಡಿ ಮಜಲ್ ಮನೆ ನಿವಾಸಿ ಜೋನ್ ಲೋಬೊ ಮೃತಪಟ್ಟ ದುರ್ದೈವಿ
ಬೋಳಂಗಡಿ ಪದ್ಮನಾಭ ಪ್ರಭು ಅವರ ತೋಟದಲ್ಲಿ ಅಡಿಕೆ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದ್ದು, ಇವರನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಜೋನ್ ಲೋಬೋ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇವರ ಪತ್ನಿ ನೀಡಿದ ದೂರಿನನ್ವಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.