ಯುವಜನ

ಹೆತ್ತವರು ಮನೆಗೆ ಬರುವಾಗ ಕಾರಿನೊಳಗೆ ನಾಲ್ಕು ಮಕ್ಕಳ ಮೃತದೇಹಗಳು ಪತ್ತೆ 

Views: 316

ಕನ್ನಡ ಕರಾವಳಿ ಸುದ್ದಿ: ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಲಾಕ್ ಹಾಕಿದ ಕಾರಿನೊಳಗೆ ಆಟವಾಡುತ್ತಿದ್ದ ಮಕ್ಕಳು ಉಸಿರುಗಟ್ಟಿ ಸಾವಿಗೀಡಾಗಿವೆ. ಜಿಲ್ಲೆಯ ರಾಂಧಿಯಾ ಗ್ರಾಮದಲ್ಲಿ  ಈ ಘಟನೆ ನಡೆದಿದೆ. 2 ರಿಂದ 7 ವರ್ಷದೊಳಗಿನ ಈ ಮಕ್ಕಳು ಲಾಕ್ ಹಾಕಿದ ಕಾರಿನೊಳಗೆ ಉಸಿರುಗಟ್ಟಿ ಸತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಮಕ್ಕಳ ಹೆತ್ತವರು ಭರತ್ ಮಂದಾನಿ ಕೃಷಿ ತೋಟದಲ್ಲಿ ಕೆಲಸ ಮಾಡಲು ಅಂದು ಬೆಳಗ್ಗೆ 7.30ರ ವೇಳೆಗೆ ಹೋಗಿದ್ದರು. ಆಗ ಅವರ ಏಳು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟುಹೋಗಿದ್ದರು. ಅವರಲ್ಲಿ ನಾಲ್ವರು ಮಕ್ಕಳು ಮನೆ ಸಮೀಪ ನಿಲ್ಲಿಸಿದ್ದ ತೋಟದ ಮಾಲೀಕನ ಕಾರಿನೊಳಗೆ ಹೋಗಿ ಆಟವಾಡುತ್ತಿದ್ದರು.

ಆದರೆ ಅಂದು ಸಂಜೆ ಮಕ್ಕಳ ಹೆತ್ತವರು ಹಾಗೂ ಮಾಲೀಕರು ವಾಪಸ್ ಬಂದಾಗ ಕಾರಿನೊಳಗೆ ಮಕ್ಕಳ ಮೃತದೇಹಗಳು ಕಂಡುಬಂದವು. ಅಮ್ರೇಲ್ ಪೊಲೀಸ್ ಠಾಣೆಯಲ್ಲಿ ಇದೊಂದು ಅಚಾನಕ್ ಆಗಿ ಸಂಭವಿಸಿದ ಘಟನೆ ಎಂದು ದಾಖಲಾಗಿದ್ದು ತನಿಖೆ ಮುಂದುವರಿದಿದೆ

Related Articles

Back to top button
error: Content is protected !!