ಕರಾವಳಿ
ನಿಯಂತ್ರಣ ತಪ್ಪಿ ಬೈಕ್ ಗದ್ದೆಗೆ ಉರುಳಿ ಬಿದ್ದು ಸವಾರ ಸಾವು

Views: 138
ಕನ್ನಡ ಕರಾವಳಿ ಸುದ್ದಿ :ನಿಯಂತ್ರಣ ತಪ್ಪಿ ಬೈಕ್ ಗದ್ದೆಗೆ ಉರುಳಿ ಬಿದ್ದು ಸವಾರ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ಕುಂದಾಪುರ ತೆಕ್ಕಟ್ಟೆ ಸಮೀಪದ ಕೊಮೆಯಲ್ಲಿ ಸಂಭವಿಸಿದೆ.
ಪಡುಕರೆ ನಿವಾಸಿ ಮಹೇಂದ್ರ (32) ಮೃತ ದುರ್ದೈವಿ.
ಸಂಬಂಧಿಕರ ಮನೆಯಲ್ಲಿ ದೀಪಾವಳಿ ಹಬ್ಬದ ಕಾರ್ಯಕ್ರಮವನ್ನು ಮುಗಿಸಿ ತಡರಾತ್ರಿ ಬೈಕ್ ನಲ್ಲಿ ಮಹೇಂದ್ರ ಬರುತ್ತಿದ್ದ ವೇಳೆ ತೆಕ್ಕಟ್ಟೆ– ಕೊಮೆ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಹಿತ ರಸ್ತೆ ಬದಿಯ ಗದ್ದೆಗೆ ಆಯತಪ್ಪಿ ಬಿದ್ದಿದ್ದಾರೆ. ಗದ್ದೆಯಲ್ಲಿ ನೀರಿದ್ದುದರಿಂದ ಉಸಿರುಗಟ್ಟಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೃಷಿಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಕೊಂಡಿದ್ದು, ಬೈಕ್ ಚಾಲಕನ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ಮಗುಚಿ ಬಿದ್ದಿದ್ದರಿಂದ ನೀರಿನಲ್ಲಿ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.