ಕರಾವಳಿ

ಬೈಂದೂರು ಒತ್ತಿನೆಣೆ ಕ್ರಾಸ್ ಬಳಿ ಸಿಮೆಂಟ್‌ ಲಾರಿ ಪಲ್ಟಿ; ಚಾಲಕ ಸಾವು

Views: 129

ಬೈಂದೂರು: ಒತ್ತಿನೆಣೆ ಕ್ರಾಸ್ ಬಳಿ ಸಿಮೆಂಟ್‌ ಲಾರಿ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದಾನೆ. ಝಾರ್ಖಂಡ್‌ ಮೂಲದ ಚಾಲಕ ದಾಮೋದರ ಯಾದವ್‌ (55) ಮೃತಪಟ್ಟವರು.

ಮಂಗಳೂರಿಗೆ ತೆರಳುತ್ತಿದ್ದ  ಲಾರಿ ಒತ್ತಿನಣೆ ಹೇನಬೇರು  ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಕ್ಕದ ರಸ್ತೆಗೆ ಮಗುಚಿ ಬಿದ್ದಿದೆ. ಸಿಮೆಂಟ್ ಚೀಲಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಗ್ನಿಶಾಮಕ ದಳದವರ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಲಾಯಿತು

ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Related Articles

Back to top button
error: Content is protected !!