ಇತರೆ
ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ: ದಂಪತಿ,ಮಗ ಹಾಗೂ ಮಾವ ಸಾವು

Views: 66
ಬೀದರ್: ಬೀದರ್ – ಜಹೀರಾಬಾದ್ ಮುಖ್ಯ ರಸ್ತೆಯಲ್ಲಿ ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ನೆರೆಯ ತೆಲಂಗಾಣದ ಹದನೂರ ಸಮೀಪದ ಗಣೇಶಪೂರ್ ಗ್ರಾಮದ ಸಿದ್ರಾಮ್ ( 70), ಜಗನ್ನಾಥ (40), ರೇಣುಕಾ (36), ವಿನಯಕುಮಾರ್ (14) ಮೃತರು.
ಪತಿ-ಪತ್ನಿ, ಮಗ ಹಾಗೂ ಮಾವ ಘಟನೆಯಲ್ಲಿ ಮೃತಪಟ್ಟಿದ್ದಾರೆ.ಹೊಲದಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ ಬಸ್ ಡಿಕ್ಕಿ ಹೊಡೆದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಿದ್ರಾಮ ಎಂಬುವರನ್ನು ಜಹೀರಾಬಾದ್ ಪಟ್ಟಣದ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ಗಡಿ ಸಮೀಪದಲ್ಲೇ ಬರುವ ತೆಲಂಗಾಣದ ಗಣೇಶಪುರ ಬಳಿ ಘಟನೆ ನಡೆದಿದ್ದು, ಸ್ಥಳದಲಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ಬ್ರಿಮ್ಸ್‌ಗೆ ಸಾಗಿಸಲಾಗಿದೆ.






