ಇತರೆ
ಹೆಬ್ರಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತದೇಹ ಪತ್ತೆ

Views: 217
ಹೆಬ್ರಿ: ತಾಲೂಕಿನ ಮುದ್ರಾಡಿ ಬಲ್ಲಾಡಿ ಪರಿಸರದಲ್ಲಿ ವರುಣನಬ್ಬರಕ್ಕೆ ಕೊಚ್ಚಿಹೋದ ವೃದ್ಧೆಯ ಮೃತದೇಹ ಸೋಮವಾರ ಪತ್ತೆಯಾಗಿದೆ.
85 ವರ್ಷ ಪ್ರಾಯದ ಚಂದ್ರ ಗೌಡತಿ ಮನೆ ಹೊರಗಿನ ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾತ್ರಿ 9ರ ತನಕ ಹುಡುಕಿದರೂ ವೃದ್ಧೆ ಪತ್ತೆಯಾಗಿಲ್ಲ.ಸೋಮವಾರ ಮತ್ತೆ ಹುಡುಕಾಡಿದಾಗ ಮನೆಯಿಂದ ಸುಮಾರು ದೂರದ ಗದ್ದೆಯಲ್ಲಿ ಮೃತ ದೇಹ ಪತ್ತೆಯಾಗಿದೆ.ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಜಲ ಪ್ರವಾಹ ಇದಾಗಿದೆ.






