ಕರಾವಳಿ
ಕಾರ್ಕಳದಲ್ಲಿ ಭೀಕರ ಅಪಘಾತ; ತಂದೆ ಸಹಿತ ಮೂರು ಮಕ್ಕಳ ದುರ್ಮರಣ

Views: 314
ಕಾರ್ಕಳ: ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಇಂದು (ಸೆ.30) ಭೀಕರ ಅಪಘಾತ ಸಂಭವಿಸಿದೆ. ಮಿನಿ ಲಾರಿ ಮತ್ತು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ವೇಣೂರಿನಿಂದ ನಲ್ಲೂರು ಕಡೆಗೆ ಬರುತ್ತಿದ್ದ ಬೈಕ್ಗೆ ಕಾರ್ಕಳದಿಂದ ಗುರುವಾಯನಕೆರೆಯತ್ತ ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.
ಬೈಕ್ನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳಿದ್ದರು. ತಂದೆ ಸುರೇಶ್ ಆಚಾರ್ಯ (36), ಮಕ್ಕಳಾದ ಸಮಿಕ್ಷಾ (7) ಸುಶ್ಮಿತಾ (5) ಸುಶಾಂತ್ (2) ಮೃತಪಟ್ಟವರು. ತಾಯಿ ಮೀನಾಕ್ಷಿ (32) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






